
ಹುಕ್ಕೇರಿ ವಿದ್ಯುತ್ ಸಂಘದ ಚುನಾವಣೆ ; ಸಲ್ಲಿಕೆಯಾದ ನಾಮಪತ್ರಗಳ ಸಂಖ್ಯೆ ಎಷ್ಟು….?

ಬೆಳಗಾವಿ : ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರ ಆಕ್ಕೆ ಚುನಾವಣಾ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿದ್ದು ಅನೇಕರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ತೀವ್ರ ಕುತೂಹಲ ಮೂಡಿಸಿರುವ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಸಧ್ಯ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಭರ್ಜರಿ ಪೈಪೋಟಿ ಏಪರ್ಟಿದೆ.
ಬರುವ ಸೆಪ್ಟೆಂಬರ್ 28 ಮತದಾನ ನಡೆಯಲಿದ್ದು ಸಧ್ಯ 164 ನಾಮಪತ್ರ ಸಲ್ಲಿಕೆಯಾಗಿವೆ. ಬರುವ 22 ರ ವರೆಗೆ ನಾಮಪತ್ರ ವಾಪಸ್ ಪಡೆಯುವ ಅವಕಾಶ ಇದೆ ಎಂದು ಚಿಕ್ಕೋಡಿ ಎಸಿ ಸುಭಾಷ ಸಂಪಗಾಂವಿ ಮಾಹಿತಿ ನೀಡಿದ್ದಾರೆ.