ಡಿಕೆಶಿ ವಿರುದ್ಧ ಸೆಡ್ಡು ಹೊಡೆದು ಸಾಹುಕಾರ್ ಖರೀದಿಸಿದ್ದ ಬಂಗ್ಲೆ ಮಾರಾಟಕ್ಕೆ…?
ಬೆಂಗಳೂರು : ಬೆಂಗಳೂರಿನ ಹೃದಯ ಭಾಗದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಖರೀದಿಸಿದ್ದ ಬಂಗ್ಲೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂಬ ವರದಿ ಸಧ್ಯ ಎಲ್ಲೆಡೆ ಕೇಳಿಬರುತ್ತಿದೆ.
ಯಡಿಯೂರಪ್ಪ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಅವರಿಗೆ ಟಕ್ಕರ್ ಕೊಡಲು ಬೆಂಗಳೂರಿನ ಸದಾಶಿವನಗರದಲ್ಲಿ ಭವ್ಯ ಬಂಗಲೆ ಖರೀದಿ ಮಾಡಿದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ಈಗ ಆ ಬಂಗಲೆಯನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕನ್ನಡದ ದಿನಪತ್ರಿಕೆ ಒಂದು ವರದಿ ಮಾಡಿದೆ.
ಬೆಂಗಳೂರಿನ ಹೃದಯ ಭಾಗವಾದ ಸದಾಶಿವ ನಗರದಲ್ಲಿ ಡಿ.ಕೆ.ಶಿವಕುಮಾರ್ ಭವ್ಯ ಬಂಗಲೆಯನ್ನು ಹೊಂದಿದ್ದಾರೆ. ಇವರಿಗೆ ಪೈಪೋಟಿ ಕೊಡಲು ಡಿಕೆಶಿ ಮನೆಯ ಹಿಂದಿನ ರಸ್ತೆಯಲ್ಲಿರುವ ಬಂಗ್ಲೆಯನ್ನು ರಮೇಶ್ ಜಾರಕಿಹೊಳಿ ಖರೀದಿಸಿದ್ದರು.
ಸಮ್ಮಿಶ್ರ ಸರ್ಕಾರ ಕೆಡವಲು ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿ ನಂತರ ಬಿಜೆಪಿ ಸೇರಿ ಸಚಿವರಾದರು. ಡಿಕೆಶಿ ಜೊತೆ ಜಿದ್ದಿಗೆ ಬಿದ್ದಿದ್ದ ರಮೇಶ್ ಜಾರಕಿಹೊಳಿ ಹಿಂದೆ ಅವರಿದ್ದ ಜಲಸಂಪನ್ಮೂಲ ಖಾತೆಯನ್ನೇ ಪಡೆಯುವ ಮೂಲಕ ರಮೇಶ್ ಜಾರಕಿಹೊಳಿ ಸೆಡ್ಡು ಹೊಡೆದಿದ್ದರು.
ಸಧ್ಯ ರಮೇಶ್ ಜಾರಕಿಹೊಳಿ ಖರೀದಿಸಿದ್ದ ಬಂಗಲೆಯಲ್ಲಿ ವಾಸ್ತು ಸಮಸ್ಯೆ ಇದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ರಮೇಶ್ ಜಾರಕಿಹೊಳಿ ರಾಜಕೀಯ ಹಿನ್ನಡೆ ಅನುಭವಿಸಿದ್ದು ತಮ್ಮ ಭವ್ಯ ಬಂಗಲೆಯನ್ನು ಮಾರಾಟಕ್ಕೆ ಇಡ್ಟಿದ್ದಾರೆ ಎಂಬ ವರದಿಯಾಗಿದೆ.

