ಸಾಹುಕಾರ್ ಹೆಸರು ಹೆಳುತ್ತಿದ್ದಂತೆ ಡಿಕೆಶಿ ಏನಂದ್ರು ಗೊತ್ತಾ…?
ಬೆಳಗಾವಿ : ಲೋಕಸಭಾ ಚುನಾವಣೆ ಮುದಿದ ನಂತರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ಟಿಕೆಟ್ ಕೌಂಟರ್ ನೀಡಿದ್ದಾರೆ.
ಬೆಳಗಾವಿ ನಗರದಲ್ಲಿ ಸೋಮವಾರ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ರಮೇಶ್ ಜಾರಕಿಹೊಳಿ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಾನು ಎಲ್ಲರ ಹೇಳಿಕೆಗೂ ಉತ್ತರಿಸಲ್ಲ. ನನ್ನ ಲೇವಲ್ ಇದ್ದವರಿಗೆ ಉತ್ತರಿಸುವೆ ಎಂದರು.
ಮೈಸೂರು ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕಳೆದ ಚುನಾವಣೆಯಲ್ಲಿ ತಂದೆ ಮಕ್ಕಳ ವಿರುದ್ಧ ಏನೆಂದು ಆರೋಪಿಸಿದ್ದರು.
ಕಾಂಗ್ರೆಸ್ ವಿರುದ್ಧ ಮಾತನಾಡುವ ನೈತಿಕತೆ ಬಿಜೆಪಿ ನಾಕರಿಗೆ ಇಲ್ಲ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕೊಟ್ಟ ಪ್ರಣಾಳಿಕೆಯಲ್ಲಿ ಎಷ್ಟು ಅನುಷ್ಠಾನಕ್ಕೆ ತಂದಿದ್ದಾರೆ ಎಂದು ಉತ್ತರಿಸಲಿ ಎಂದರು.
ಕಾಂಗ್ರೆಸ್ ನಾಯಕರು ಹೊರದೇಶಗಳಲ್ಲಿ ಇಟ್ಟಿದ್ದ ಕಪ್ಪುಹಣ ತಂದು ದೇಶದ ಜನರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ಹಾಕುವ ಭರವಸೆಯನ್ನು ನೀಡಿದ್ದರು.
ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದವರು ನೂರಾರು ಬಲಿದಾನದ ನಂತರ ಕೃಷಿ ಮಸೂದೆ ವಾಪಸ್ ಪಡೆದವರು ಬಿಜೆಪಿಯವರು. ಆದರೆ ಕಾಂಗ್ರೆಸ್ ಕೊಟ್ಡಿದ್ದ ಐದು ಗ್ಯಾರಂಟಿ ಭರವಸೆಗಳನ್ನು ಅನುಷ್ಠಾನಕ್ಕೆ ತಂದು ಕೊಟ್ಟ ಮಾತು ಉಳಿಸಿಕೊಂಡಿದೆ ಎಂದರು.
ಲಕ್ಷ್ಮೀ ಹೆಬ್ಬಾಳ್ಕರ್ ರಾತ್ರಿ ಹೆಚ್ಚಿನ ಪೆಗ್ ಹೊಡೆಯಬೇಕು ಎಂಬ ಸಂಜಯ್ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಇವರು. ಹೆಣ್ಣುಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವವರ ಕುರಿತು ನಾನು ಹೆಚ್ಚು ಮಾತನಾಡಲಾರೆ. ಇವರ ಸಂಸ್ಕೃತಿ ಏನೆಂದು ಜನರಿಗೆ ಗೊತ್ತು ಎಂದರು.


