2028 ಕ್ಕೆ ಲಕ್ಷ್ಮಣ ಸವದಿಯನ್ನು ಸೋಲಿಸುತ್ತೇನೆ ; ಜಾರಕಿಹೊಳಿ ಶಪಥ

ಬೆಳಗಾವಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸವದಿ ವಿರುದ್ಧ ನಮ್ಮ ಅಭ್ಯರ್ಥಿ ಹೀನಾಯವಾಗಿ ಸೋತಾಗ ಮನಸ್ಸಿಗೆ ತುಂಬಾ ನೋವಾಗಿತ್ತು. ಆದರೆ ಈಗ ನಮ್ಮ ಸಂಘಟನೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. 2028 ಕ್ಕೆ ಲಕ್ಷ್ಮಣ ಸವದಿಯನ್ನು ಸೋಲಿಸಿಯೇ ತೀರುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಸ್ಥಳೀಯ ಸಂಸ್ಥೆ ಚುನಾವಣೆ ಪಕ್ಷಾತೀತವಾಗಿ ನಡೆಯುತ್ತವೆ. ಅಥಣಿ ಕೃಷ್ಣಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಎಲ್ಲಾ ಪಕ್ಷದ ಮುಖಂಡರು ನಮ್ಮ ಜೊತೆಗೂಡಿದ್ದರೂ. ಅಥಣಿಯಲ್ಲಿ ನಮ್ಮದೇ ಸಂಘಟನೆ ಮಾಡಿದ್ದೇವೆ ಎಂದರು.
ಕೃಷ್ಣಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಸೋಲುತ್ತೇವೆ ಎಂಬುದು ಗೊತ್ತಿತ್ತು. ಆದರೆ ಚುನಾವಣೆ ಮಾಡುವ ಉದ್ದೇಶದಿಂದ ಎದುರಿಸಿದ್ದೇವೆ. 15 ಸಾವಿರ ಮತದಾರರ ಸಂಖ್ಯೆಯನ್ನು ಕೇವಲ ಐದು ಸಾವಿರಕ್ಕೆ ಇಳಿಸೊದ್ದಾರೆ. ಅದರಲ್ಲಿ ನಮ್ಮ ಪರವಾಗಿ ರೈತರು ಮತದಾನ ಮಾಡಿದ್ದು ಇದು ಹೀನಾಯ ಸೋಲು ಹೇಗಾಗುತ್ತದೆ ಎಂದು ಪ್ರಶ್ನಿಸಿದರು.
ರಮೇಶ್ ಕತ್ತಿ ಇವತ್ತಿಗೂ ನನ್ನ ಆತ್ಮೀಯ. ಅವನಿಗೂ ನನಗೂ ಯಾವುದೇ ವೈಷಮ್ಯ ಇಲ್ಲ. ವಾಲ್ಮೀಕಿ ಸಮಾಜದ ಬಗ್ಗೆ ಮಾತನಾಡಿದ್ದಕ್ಕೆ ನನಗೆ ಬೇಜಾರ ಆಗಿದೆ. ಆದರೆ ರಮೇಶ್ ಕತ್ತಿ ಹುಚ್ಚ ಹಾಗೆ ಮಾತನಾಡಬಾರದೀತ್ತು. ನಾನು ಹುಕ್ಕೇರಿ ವಿದ್ಯುತ್ ಸಹಕಾರ ಕ್ಷೇತ್ರ ಚುನಾವಣೆ ಮಾಡಬೇಡಿ ಎಂದಿದ್ದೆ.
ಆದರೆ ಚುನಾವಣೆ ಆಯಿತು. ನಾನು ವಿದೇಶ ಪ್ರವಾಸದಲ್ಲಿದೆ. ದಯವಿಟ್ಟು ರಮೇಶ ಕತ್ತಿ ಅವರು ಮಾತಿನ ಶೈಲಿ ಬದಲಾವಣೆ ಮಾಡಿಕೊಳ್ಳಬೇಕು. ಇಲ್ಲದಿದ್ದರೇ ರಾಜಕೀಯ ಜೀವನದಲ್ಲಿ ಸಾಕಷ್ಟು ಹೊಡೆತ ಬಿಳುತ್ತದೆ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ನವೆಂಬರ್ ಕ್ರಾಂತಿಯ ಬಗ್ಗೆ ನಮ್ಮ ಪಕ್ಷದವರು ಯಾಕೆ ಚರ್ಚೆ ಮಾಡುತ್ತಿದ್ದಾರೆ. ತಿಳಿಯುತ್ತಿಲ್ಲ. ಡಿ.ಕೆ.ಶಿವಕುಮಾರ ಅವರನ್ನಾದರೂ ಸಿಎಂ ಮಾಡಲಿ ಅಥವಾ ಸಿದ್ದರಾಮಯ್ಯ ಅವರೇ ಮುಂದುವರೆಯಲಿ ನಮಗೆ ಯಾಕೆ ಬೇಕು. ನಾವು ವಿರೋಧ ಪಕ್ಷ ಕೆಲಸ ಮಾಡಿಕೊಂಡು ಹೋದರೆ ಸಾಕು ಎಂದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಬಿಜೆಪಿಯಿಂದ ಉಚ್ಚಾಟಣೆಯಾದಾಗಿನಿಂದಲೂ ಬಿಜೆಪಿಗೆ ಮರಳಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಹೇಳಿದ್ದೆ. ವಿಜಯೇಂದ್ರ ಮುಂದುರೆಸಿದರೆ ಮಾತ್ರ ಬೇರೆ ಪಕ್ಷ ಕಟ್ಟುವುದಾಗಿ ಹೇಳಿದ್ದಾರೆ. ಯತ್ನಾಳ ಉಚ್ಚಾಟಣೆಯಾಗಿ 8 ತಿಂಗಳು ಕಳೆದಿದೆ. ಯತ್ನಾಳ ರಾಜ್ಯ ರಾಜಕಾರಣದಲ್ಲಿ ಮೇಲೆ ಬಂದಿದ್ದಾರೆ. ವಿಜಯೇಂದ್ರ ಎಷ್ಟು ಕೇಳಗೆ ಬಂದಿದ್ದಾನೆ ಎನ್ನುವುದನ್ನು ತುಲನೆ ಮಾಡಿ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಬೇಕು.
ಪಕ್ಷಕ್ಕೆ ಯಾರು ಅನಿವಾರ್ಯ ಅಲ್ಲ. ಯತ್ನಾಳ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ. ಆದರೆ ಯತ್ನಾಳ ಅವರನ್ನು ಬಿಜೆಪಿ ಅವರನ್ನು ಕಳೆದುಕೊಳ್ಳಬಾರದು ಎಂದರು.
ನಮ್ಮದ್ದು ಯಡಿಯೂರಪ್ಪನ ವಿರುದ್ಧ ನಾವು ಎಂದಿಗೂ ಮಾತನಾಡಿಲ್ಲ. ವಿಜಯೇಂದ್ರನಿಂದಲೇ ಬಿಜೆಪಿ ಪಕ್ಷ ಹಾಳಾಗುತ್ತಿದೆ. ಇದು ನಮಗೂ ನೋವಿದೆ.
ಅವರ ಬದಲಾವಣೆ ಮಾಡುವ ಹೋರಾಟದ ಬಗ್ಗೆ ಈಗ ಮಾಧ್ಯಮದ ಮುಂದೆ ಚರ್ಚೆ ಮಾಡುವುದಿಲ್ಲ ಎಂದರು.
ರೈತರು ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಮಾಡುವ ಕುರಿತು ರೈತರು ನಡೆಸುತ್ತಿರುವ ಹೋರಾಟದ ಪರವಾಗಿ ನಾನು ಇದ್ದೇನೆ. ರೈತರಿಗೆ ನ್ಯಾಯ ಸಿಗಬೇಕು. ಸರಕಾರ ಆದಷ್ಟು ಬೇಗ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದರು.


