ರಾಮದುರ್ಗದಲ್ಲಿ ಗೆದ್ದ ಸ್ವಾಭಿಮಾನ ; ಹೊರಗಿನವರಿಗೆ ಗೇಟ್ ಪಾಸ್
ರಾಮದುರ್ಗ : ಕೊನೆ ಕ್ಷಣದಲ್ಲಿ ಬಿಜೆಪಿ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ಟಿಕೆಟ್ ಕೈ ತಪ್ಪಿಸಿ ಹೊರಗಿನಿಂದ ಬಂದ ಚಿಕ್ಕರೇವಣ್ಣ ಅವರಿಗೆ ಮಣೆ ಹಾಕಿದ್ದ ಬಿಜೆಪಿಗೆ ಈ ಬಾರಿ ತೀವ್ರ ಮುಖಭಂಗ ಅನುಭವಿಸಿದೆ.
ಬಿಜೆಪಿಯಿಂದ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಈ ಬಾರಿ ಡಿಕೆಟ್ ನಿರೀಕ್ಷೆಯಲ್ಲಿ ಇದ್ದರು. ಜೊತೆಗೆ ಅವರಿಗೆ ಟಿಕೆಟ್ ಕೈ ತಪ್ಪಿದರು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸುತ್ತಾರೆ ಎಂಬ ಮಾತಿತ್ತು. ಮಾಜಿ ಜಿ.ಪಂ ಸದಸ್ಯ ರಮೇಶ ದೇಶಪಾಂಡೆ, ಪಂಚಮಸಾಲಿ ಮುಖಂಡ ಪಿ.ಎಫ್ ಪಾಟೀಲ್, ಯುವ ನಾಯಕ ಮಲ್ಲನ ಯಾದವಾಡ ಇವರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟಿದ್ದರು ಬಿಜೆಪಿ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಮೂರು ದಿನಗಳದಲ್ಲಿ ಪಕ್ಷ ಸೇರಿದ್ದ ಕಾಂಗ್ರೆಸ್ ವ್ಯಕ್ತಿಗೆ ಟಿಕೆಟ್ ಕೊಟ್ಟು ಹಿನಾಯ ಸೋಲು ಅನುಭವಿಸುವಂತಾಯಿತು.
ಹಣದಿಂದಲೇ ಈ ಬಾರಿ ರಾಮದುರ್ಗ ಗೆಲ್ಲುವ ಉತ್ಸಾಹದಲ್ಲಿದ್ದ ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣಗೆ ತೀವ್ರ ಮುಜುಗರ ಉಂಟಾಗಿದೆ. ಸ್ವಾಭಿಮಾನಿ ಕಾಂಗ್ರೆಸ್ ಕೈ ಹಿಡಿದ ಕಾರಣ ಅಶೋಕ್ ಪಟ್ಟಣ ಸುಲಭ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಬಿಜೆಪಿಗೆ ತಕ್ಕ ಪಾಠ ಕಲಿಸುವಲ್ಲಿ ರಾಮದುರ್ಗ ಜನ ಯಶಸ್ವಿಯಾಗಿದ್ದು ಸುಳ್ಳಲ್ಲ.
ರಾಮದುರ್ಗ –
ಗೆಲುವು -ಅಶೋಕ್ ಪಟ್ಟಣ – ಕಾಂಗ್ರೆಸ್ – 80,294
ಸೋಲು – ಚಿಕ್ಕರೇವಣ್ಣ – ಬಿಜೆಪಿ – 68,5064

