ಪ್ರಿಯಾಂಕಾ ಜಾರಕಿಹೋಳಿ ಗೆಲುವಿಗೆ ವಿಭಿನ್ನ ಹರಕೆ ಹೊತ್ತ ಅಭಿಮಾನಿಗಳು
ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿಯವರ ಗೆಲುವಿಗಾಗಿ ಅಭಿಮಾನಿಗಳು ವಿಭಿನ್ನ ಹರಕೆ ಹೊತ್ತುಕೊಳ್ಳುವ ಮೂಲಕ ಗಮನಸೆಳೆದಿದ್ದಾರೆ.
ಜೂನ್ 4 ರಂದು ಲೋಕಸಭೆ ಚುನಾವಣೆ ಫಲಿತಾಂಶದ ಹಿನ್ನಲೆಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಗೆಲುವಿಗಾಗಿ ಅಭಿಮಾನಿಗಳು ಹರಕೆ ಹೊತ್ತುಕೊಂಡಿದ್ದಾರೆ. ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮದ ಬಜರಂಗ ಶಿಂಗೆ ಹಾಗೂ ರಮೇಶ ಮಾಳಿ ಎಂಬುವವರು ದೀರ್ಘದಂಡ ನಮಸ್ಕಾರದ ಮೂಲಕ ಹರಕೆ ಹೊತ್ತಿದ್ದಾರೆ.
ಗ್ರಾಮದ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ,ಅಲ್ಲಿಂದ ಅಕ್ಕೋಳ ಗ್ರಾಮದ ಶ್ರೀ ಸಂತ ಬಾಳುಮಾಮಾ ದೇವಸ್ಥಾನ ವರೆಗೆ ದಂಡ ನಮಸ್ಕಾರ ಹಾಕಿ,ಪ್ರಿಯಾಂಕಾ ಜಾರಕಿಹೋಳಿ ಗೆಲುವಿಗಾಗಿ ಪ್ರಾಥನೆ ಸಲ್ಲಿಸಿದರು.
ಇದೇ ಸಂಧರ್ಭದಲ್ಲಿ ಮಾತನಾಡಿದ ಅಭಿಮಾನಿಗಳು ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಪ್ರೀಯಾಂಕಾ ಜಾರಕಿಹೋಳಿ ಅತ್ಯಥಿಕ ಮತಗಳಿಂದ ಗೆಲವು ಸಾಧಿಸಲಿ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸರ್ಕಾರ ರಚನೆ ಆಗಲಿ ಎನ್ನು ಉದ್ದೇಶದಿಂದ ಸುಮಾರು 6 ಕೀ ಮೀ ವರೆಗೆ ದಂಡನಮಸ್ಕಾರ ಹಾಕಿ ದೇವರಲ್ಲಿ ಪ್ರಾರ್ಥಿಸಿಕೊಂಡಿದೇವೆ ಎಂದರು.
ಈ ಸಂಧರ್ಭದಲ್ಲಿ ಭಾರತಿ ಬರಗಾಲೆ,ಪ್ರಕಾಶ ಬರಗಾಲೆ,ಬಸವರಾಜ ಬರಗಾಲೆ,ದೀಲಿಪ ವರಾಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..


