ತಂದೆಗೆ ತಕ್ಕ ಮಗಳು ಪ್ರಿಯಾಂಕಾ ಜಾರಕಿಹೊಳಿ…..!
ಬೆಳಗಾವಿ : ಸಾಮಾನ್ಯವಾಗಿ ರಾಜಕಾರಣಿ ಮಕ್ಕಳು ಎಂದರೆ ಸಾಕು ದೌಲತ್ತಿನಲ್ಲೇ ಬದುಕು ಸಾಗಿಸುವವರು ಜಾಸ್ತಿ. ಅಂತಹುದರಲ್ಲಿ ಸಾಮಾನ್ಯರಲ್ಲಿ ಅಸಾಮಾನ್ಯ ವ್ಯಕ್ತಿತ್ವ ರೂಪಿಸಿಕೊಂಡವರು ವಿರಳ. ಆದರೆ ಇವೆಲ್ಲದಕ್ಕೂ ಭಿನ್ನವಾಗಿ ನಿಂತಿರುವುದು ಸಚಿವ ಸತೀಶ್ ಜಾರಕಿಹೊಳಿ ಕುಟುಂಬದ ಕುಡಿ.
ಜಾರಕಿಹೊಳಿ ಕುಟುಂಬದ ಮೂರನೇ ತಲೆಮಾರು ಸಧ್ಯ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಲೋಕಸಭಾ ಅಖಾಡಕ್ಕೆ ಇಳಿದಿದ್ದಾರೆ. ತಂದೆಯ ಕೆಲಸದ ಶ್ರೀರಕ್ಷೆ ಇವರಿಗೆ ಇದ್ದರು. ನಾನು ಸಮಾಜಸೇವೆ ಮಾಡಿ ಜನರ ಹೃದಯ ಗೆಲ್ಲುವೆ ಎಂಬ ದೃಢ ನಿರ್ಧಾರದ ಮೂಲಕವೇ ರಾಜಕಾರಣ ಮಾಡುತ್ತಿರುವುದು ವಿಶೇಷ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರದು ಸಾಮಾನ್ಯರಲ್ಲಿ ಅಸಮಾನ್ಯ ವ್ಯಕ್ತಿತ್ವ. ಅಪಾರ ಜನಬೆಂಬಲ ಇದ್ದರೂ ಅದ್ಯಾವುದನ್ನು ತಲೆಗೆ ಹಚ್ಚಿಕೊಳ್ಳದೆ ಕೇವಲ ಶ್ರದ್ಧೆಯಿಂದ ಕೆಲಸ ಮಾಡುವ ಮೂಲಕ ಜನರ ಹೃದಯ ಗೆಲ್ಲಲು ಹೊರಟಿದ್ದಾರೆ ಎಂದರೆ ತಪ್ಪಾಗಲಾರದು.
ಎಂಬಿಎ ಪದವಿ ಪಡೆದುಕೊಂಡು ತಂದೆಯಂತೆ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಿಯಾಂಕಾ ಅವರು ಹಳ್ಳಿಯ ಮುಗ್ಧ ಜನರನ್ನು ಕಾಣುವ ರೀತಿಯೇ ಬೇರೆ. ಯಾರೇ ಆದರು ನಮ್ಮ ಮನೆ ಮಗಳು ಎಂದು ಇಷ್ಟಪಡುವ ರೀತಿಯಲ್ಲಿ ನಡವಳಿಕೆ ಹೊಂದಿರುವ ಇವರ ವ್ಯಕ್ತಿತ್ವ.
ಈಗಾಗಲೇ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ. ಅಥಣಿ, ರಾಯಬಾಗ, ಹಾರೂಗೇರಿ, ಕುಡಚಿ, ನಿಪ್ಪಾಣಿ, ಕಾಗವಾಡ, ಯಮಕನಮರಡಿ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದು ಎಲ್ಲೆಡೆ ಅಪಾರ ಜನಬೆಂಬಲವೂ ಇವರಿಗೆ ವ್ಯಕ್ತವಾಗಿದೆ. ಜನರ ಪ್ರೀತಿ ಹಾಗೂ ವಿಶ್ವಾಸದಿಂದ ಈ ಬಾರಿ ಗೆಲುವು ನಮ್ಮದೆ ಎನ್ನುತ್ತಾರೆ ಪ್ರಿಯಾಂಕಾ ಜಾರಕಿಹೊಳಿ.


