Select Page

Advertisement

ಅಂಕಲಗಿ ಪೊಲೀಸರ ಭರ್ಜರಿ ‌ಕಾರ್ಯಾಚರಣೆ ; ವಾಹನ ಕಳ್ಳರ ಬಂಧನ

ಅಂಕಲಗಿ ಪೊಲೀಸರ ಭರ್ಜರಿ ‌ಕಾರ್ಯಾಚರಣೆ ; ವಾಹನ ಕಳ್ಳರ ಬಂಧನ



ಬೆಳಗಾವಿ : ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಅಂಕಲಗಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೈಕ್ ಕಳ್ಳತನವಾದ ಹಿನ್ನಲೆಯಲ್ಲಿ ಕಳೆದ ಏಪ್ರಿಲ್ 6. ರಂದು ಅಂಕಲಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಬೆನ್ನಟ್ಟಿದ್ದ ಪೊಲೀಸರು ಗೋಕಾಕ್ ಮೂಲದ ಬಸಪ್ಪ ಚಿಕ್ಕರಾಯ (22), ದುರಗಪ್ಪ ಖಾನಾಪುರ (23) ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 4.5 ಲಕ್ಷ ಮೌಲ್ಯದ ಒಂದು ಟ್ರ್ಯಾಕ್ಟರ್, ಎರಡು ಟ್ರೇಲರ್ ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ. ಗೋಕಾಕ್ ಸಿಪಿಐ ಸುರೇಶ್ ಬಾಬು ಆರ್.ಬಿ ನೇತೃತ್ವದಲ್ಲಿ ಅಂಕಲಗಿ ಠಾಣೆ ಪಿಎಸ್ಐ ಯಮನಪ್ಪ ಮಾಂಗ್ ಹಾಗೂ ಸಿಬ್ಬಂದಿಗಳ‌ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!