Select Page

Advertisement

ಪಹಲ್ಗಾಮ್ ಉಗ್ರರ ದಾಳಿ ; ಬೆಳಗಾವಿ ಜಿಲ್ಲೆಯಾದ್ಯಂತ ಮೃತರಿಗೆ ಅಂತಿಮ ನಮನ

ಪಹಲ್ಗಾಮ್ ಉಗ್ರರ ದಾಳಿ ; ಬೆಳಗಾವಿ ಜಿಲ್ಲೆಯಾದ್ಯಂತ ಮೃತರಿಗೆ ಅಂತಿಮ ನಮನ

ಬೆಳಗಾವಿ : ಜಮ್ಮು ಕಾಶ್ಮೀರದ ಪಹಲ್ಗಾಮ ನಲ್ಲಿ ಉಗ್ರಗಾಮಿಗಳ ದಾಳಿಗೆ ಬಲಿಯಾದ ಭಾರತೀಯರ ಆತ್ಮಕ್ಕೆ ಶಾಂತಿ ಕೋರಿ ಜಿಲ್ಲೆಯಾದ್ಯಂತ ಜನ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ಅಥಣಿ ಪಟ್ಟಣದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ  ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ಅಟ್ಟಹಾಸವನ್ನು ಖಂಡಿಸಿ ನೂರಾರು ವಿದ್ಯಾರ್ಥಿಗಳೊಂದಿಗೆ ಅಥಣಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ‌ ನಡೆಸಲಾಯಿತು.

ಮೇಲಿಂದೆ ಮೇಲೆ ನಡೆಯುತ್ತಿದ್ದ  ದಾಳಿಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ  ಕೇಂದ್ರ ಸರ್ಕಾರ ತೆಗೆದುಕೊಂಡ ದಿಟ್ಟ ಕ್ರಮಗಳ ನಂತರ ಉಗ್ರರು ಪ್ರವಾಸಿಗರ ಮೇಲೆ ಮಾಡಿರುವ ಈ ಅಟ್ಟಹಾಸ ಅತ್ಯಂತ ಅಖಂಡನೀಯ ಎಂದು ಆಕ್ರೋಶ ಹೊರಹಾಕಿದರು.

ಬೈಲಹೊಂಗಲದ ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ ಅವರ ಕಾರ್ಯಾಲಯದಲ್ಲಿ ಕಾಶ್ಮೀರದ ಅನಂತನಾಗ ಜಿಲ್ಲೆಯ ಪಹಲ್ಗಾಮದಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿಯಲ್ಲಿ ಜೀವತೆತ್ತ ಹಿಂದೂಗಳ ಆತ್ಮಕ್ಕೆ ಶೃದ್ಧಾಂಜಲಿ ಅರ್ಪಿಸಲಾಯಿತು.

ಗೋಕಾಕ ತಾಲೂಕಿನ ಶಿಕ್ಷಣ ಸಮೂಹ ಸಂಸ್ಥೆಗಳು, ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆ ಹಾಗೂ ಐಎಮ್‌ಎ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾರತದ ಮುಕುಟ ಕಾಶ್ಮೀರದ ಪೆಹಲ್ಗಾಮದಲ್ಲಿ ನಡೆದ ಪ್ರವಾಸಿಗರ ನರಮೇದ ಖಂಡಿಸಿ ಶುಕ್ರವಾರ ಸಂಜೆ ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಮೇಣದ ಬತ್ತಿಗಳನ್ನು ಬೆಳಗಿಸಿ ಅಗಲಿದ ಚೇತನಗಳಿಗೆ ಚಿರಶಾಂತಿ ಕೋರಲಾಯಿತು.


Advertisement

Leave a reply

Your email address will not be published. Required fields are marked *

error: Content is protected !!