Select Page

Advertisement

ಬೆಳಗಾವಿ : ಪೆಟ್ರೋಲ್ – ಡೀಸೆಲ್ ಪಡೆಯಲು ಮುಗಿಬಿದ್ದ ಜನ‌

ಬೆಳಗಾವಿ : ಪೆಟ್ರೋಲ್ – ಡೀಸೆಲ್ ಪಡೆಯಲು ಮುಗಿಬಿದ್ದ ಜನ‌





ಬೆಳಗಾವಿ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದಿಂದಾಗಿ ತೈಲಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಸಹಜವಾಗಿ ಜನ ಜೀವನದ ಮೇಲೆ ಪರಿಣಾಮ ಬೀರಿದೆ.

ಈಗಾಗಲೇ ವಾಣಿಜ್ಯ ಸಿಲಿಂಡ ರ್ ಪೂರೈಕೆ ಸ್ಥಗಿತಗೊಂಡು ಜನರು ಆತಂಕಗೊಂಡಿದ್ದರು. ಇದೀಗೆ ತೈಲ ಪೂರೈಕೆ ಕೂಡ ಸ್ಥಗಿತಗೊಳ್ಳಲಿದೆ ಎಂಬ ವದಂತಿ ಹಬ್ಬಿದ್ದರಿಂದ ಸೋಮವಾರ ರಾತ್ರೋರಾತ್ರಿ ಬೆಳಗಾವಿ ನಗರದ ಬಹುತೇಕ ಪೆಟ್ರೋಲ್ ಬಂಕ್‌ಗಳಿಗೆ ಜನರು ಮುಗಿಬಿದ್ದಿದ್ದಾರೆ.

ಮನೆಯಲ್ಲಿರುವ ನೀರು ಸಂಗ್ರಹಿಸುವ ಕ್ಯಾನ್‌ಗಳನ್ನು ಕೂಡ ತಂದು ಪೆಟ್ರೋಲ್, ಡಿಸೇಲ್ ತುಂಬಿಸಿಕೊಳ್ಳುತ್ತಿದ್ದಾರೆ. ನಗರದ ಆಜಂನಗರ, ಬಾಕ್ಸೆಟ್ ರಸ್ತೆ, ವಿನಾಯಕ ನಗರ, ಮಹಾಂತೇಶ ನಗರ, ಶ್ರೀನಗರ ಸೇರಿ ಬಹುತೇಕ ಪ್ರದೇಶಗಳಲ್ಲಿ ಜನರು ಸಾಲು ಗಟ್ಟಿ ಪೆಟ್ರೋಲ್ ಮತ್ತು ಡಿಸೇಲ್‌ಗಾಗಿ ಹರಸಾಹಸ ಪಟ್ಟರು.

ಆದರೆ, ಪೆಟ್ರೋಲ್ ಮತ್ತು ಡಿಸೇಲ್‌ಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಬಂಕ್ ಮಾಲೀಕರು ಹೇಳಿದರೂ ಯಾರು ಕೂಡ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಮನೆಯಲ್ಲಿರುವ ನೀರು ಸಂಗ್ರಹ ಸಾಧನಗಳನ್ನು ತೆಗೆದುಕೊಂಡು ಬಂದು ತೈಲ ಸಂಗ್ರಹಕ್ಕೆ ಮುಂದಾಗಿದ್ದರು.

Advertisement

Leave a reply

Your email address will not be published. Required fields are marked *

error: Content is protected !!