Select Page

Advertisement

ಕರುನಾಡ ಬಿಜೆಪಿಗೆ ಮೋದಿ ಬಲ ; ಏ.14 ಕ್ಕೆ ಪ್ರಧಾನಿ ರಾಜ್ಯ ಪ್ರವಾಸ

ಕರುನಾಡ ಬಿಜೆಪಿಗೆ ಮೋದಿ ಬಲ ; ಏ.14 ಕ್ಕೆ ಪ್ರಧಾನಿ ರಾಜ್ಯ ಪ್ರವಾಸ

ಬೆಂಗಳೂರು: ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಏ.14ರಂದು ಪ್ರಧಾನಿ ನರೇಂದ್ರ ಮೋದಿ‌ ರಾಜ್ಯಕ್ಕೆ ಬರಲಿದ್ದಾರೆ. ಮೋದಿಯವರ ಎರಡನೇ ಸುತ್ತಿನ ಚುನಾವಣಾ ಪ್ರಚಾರ ಇದಾಗಲಿದೆ.

ಡಾ.ಕೆ.ಸುಧಾಕರ್ ಸ್ಪರ್ಧಿಸಿರುವ ಚಿಕ್ಕಬಳ್ಳಾಪುರ ಹಾಗೂ ಶೋಭಾ ಕರಂದ್ಲಾಜೆ ಸ್ಪರ್ಧಿಸಿರುವ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ರೋಡ್ ಶೋ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ದೇವನಹಳ್ಳಿಯಲ್ಲಿ ಸಾರ್ವಜನಿಕ ಸಭೆ ಆಯೋಜನೆಗೆ ಸಿದ್ಧತೆ ನಡೆಸಿದೆ.

ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಎರಡು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡು ರೋಡ್ ಶೋ ನಡೆಸಲು ಪಕ್ಷ ಯೋಚಿಸಿದೆ. ಆದರೆ ಪ್ರಧಾನಮಂತ್ರಿ ಕಚೇರಿ ಸೂಚನೆಯನ್ವಯ ಮೋದಿ ಪ್ರವಾಸ, ಪ್ರಚಾರದರೀತಿ, ಸ್ಥಳ ಹಾಗೂ ದಿನಾಂಕ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.

Advertisement

Leave a reply

Your email address will not be published. Required fields are marked *

error: Content is protected !!