Video – ನಾಮಪತ್ರ ಸಲ್ಲಿಸಿದ ಹೃದಯ ಸಾಮ್ರಾಟ್ ನರೇಂದ್ರ ಮೋದಿ ; ಗತ್ತು, ಗೈರತ್ತು ಹೇಗಿದೆ ನೋಡಿ….!
ವಾರಾಣಸಿ : ಮಂಗಳವಾರ ಬೆಳಗ್ಗೆ ಕಾಲಭೈರವನ ದರ್ಶನ ಪಡೆದು ಬಳಿಕ ಗಂಗೆಗೆ ವಿಶೇಷ ಪೂಜೆ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಇದಕ್ಕೂ ಮುನ್ನ ಮೇ 13ರಂದು ಆ ಪ್ರದೇಶದಲ್ಲಿ ರೋಡ್ ಶೋ ನಡೆಸಿದ್ದರು. ರಾಜನಾಥ್ ಸಿಂಗ್, ಅಮಿತ್ ಶಾ, ಜಿಪಿ ನಡ್ಡಾ, ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ನಿತೀಶ್ ಕುಮಾರ್ ಪ್ರಧಾನಿ ಮೋದಿಯವರ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಸುವ ವೇಳೆ ಅಯೋಧ್ಯೆಯಲ್ಲಿ ಭಗವಾನ್ ರಾಮನ ಪ್ರಾಣ-ಪ್ರತಿಷ್ಠೆಗೆ ಮುಹೂರ್ತವನ್ನು ನಿರ್ಧರಿಸಿದ ಪಂಡಿತ್ ಗಣೇಶ್ವರ ಶಾಸ್ತ್ರಿ ಜೊತೆಗೆ ಬೈಜನಾಥ್ ಪಟೇಲ್ ಸಮುದಾಯದ ಆರ್‌ಎಸ್‌ಎಸ್ ಸ್ವಯಂಸೇವಕ, ಒಬಿಸಿ ಸಮುದಾಯದ ಲಾಲ್‌ಚಂದ್ ಕುಶ್ವಾಹಾ ಮತ್ತು ದಲಿತ ಸಮುದಾಯದ ಸಂಜಯ್ ಸೋಂಕರ್ ಸಹ ಇದೇ ವೇಳೆ ಮೋದಿ ಜೊತೆಗೆ ಉಪಸ್ಥಿತರಿದ್ದರು.
ವಾರಣಾಸಿಯಿಂದಲೇ ಪ್ರಧಾನ ಮಂತ್ರಿ ಕ್ಷೇತ್ರದಿಂದ ಸತತ ಮೂರನೇ ಅವಧಿಗೆ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಕೆಯ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಇತರ ಎನ್‌ಡಿಎ ನಾಯಕರೊಂದಿಗೆ ಹೋಗಿದ್ದಾರೆ
ವಾರಣಾಸಿ ಲೋಕಸಭಾ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸಿದ್ದೇನೆ. ಈ ಐತಿಹಾಸಿಕ ಸ್ಥಾನದ ಜನರಿಗೆ ಸೇವೆ ಸಲ್ಲಿಸುವುದು ಗೌರವವಾಗಿದೆ. ಜನರ ಆಶೀರ್ವಾದದಿಂದ ಕಳೆದ ದಶಕದಲ್ಲಿ ಗಮನಾರ್ಹ ಸಾಧನೆಗಳು ನಡೆದಿವೆ. ಮುಂದಿನ ದಿನಗಳಲ್ಲಿ ಈ ಕಾರ್ಯವು ಇನ್ನಷ್ಟು ವೇಗವಾಗಲಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 3.02 ಕೋಟಿ ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ಪ್ರಧಾನಿ ಮೋದಿಗೆ ಸ್ವಂತ ಮನೆ, ಜಮೀನು, ಕಾರು ಇಲ್ಲ. ಸದ್ಯ ಕೈಯಲ್ಲಿ 52,920 ರೂಪಾಯಿ. ನಗದು ಹೊಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದು, ಒಟ್ಟು 3.02 ಕೋಟಿ ಮೌಲ್ಯದ ಚರಾಸ್ತಿಯನ್ನು ಘೋಷಣೆ ಮಾಡಿದ್ದಾರೆ.
ಮೋದಿ 52,920 ರೂಪಾಯಿ ನಗದು ಹೊಂದಿದ್ದಾರೆ. ಜಮೀನು, ಮನೆ, ಕಾರು ಹೊಂದಿಲ್ಲ. ಮೋದಿ ಯಾವುದೇ ಕಂಪನಿಯಲ್ಲಿ ಷೇರು ಖರೀದಿಸಿಲ್ಲ, ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿಲ್ಲ. ಪ್ರಧಾನಿ ಮೋದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎರಡು ಖಾತೆಗಳನ್ನು ಹೊಂದಿದ್ದಾರೆ.
ಗಾಂಧಿನಗರ ಎಸ್‌ಬಿಐನ ಶಾಖೆಯಲ್ಲಿ 73,304 ರೂ.ಗಳನ್ನು ಠೇವಣಿ ಇರಿಸಿದ್ದರೆ, ವಾರಣಾಸಿ ಎಸ್‌ಬಿಐನ ಶಾಖೆಯಲ್ಲಿ ಕೇವಲ 7,000 ರೂ ಠೇವಣಿ ಇರಿಸಿದ್ದಾರೆ. ಎಸ್‌ಬಿಐನಲ್ಲಿ 2 ಕೋಟಿ 85 ಲಕ್ಷ 60 ಸಾವಿರ 38 ರೂಪಾಯಿ ಮೌಲ್ಯದ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದಾರೆ. ಇನ್ನು, 2 ಲಕ್ಷ 67 ಸಾವಿರದ 750 ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ. ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್‌ನಲ್ಲಿ 9 ಲಕ್ಷ 12 ಸಾವಿರದ 398 ರೂ. ಇದೆ ಎಂದು ಘೋಷಿಸಿದ್ದಾರೆ.


