Select Page

Advertisement

ಮಂಗಳೂರಿನ ಪ್ರೇಮಿಗಳ ಜೊತೆಗೂಡಿ ಗಂಡನ ಕೊಂದ ಉಮಾ ಜೈಲುಪಾಲು

ಮಂಗಳೂರಿನ ಪ್ರೇಮಿಗಳ ಜೊತೆಗೂಡಿ ಗಂಡನ ಕೊಂದ ಉಮಾ ಜೈಲುಪಾಲು

ಬೆಳಗಾವಿ : ಉದ್ಯಮಿ ಸಂತೋಷ್ ಪದ್ಮಣ್ಣವರ ಸಾವು ಪ್ರಕರಣಕ್ಕೆ ಸಂಬಂಧಿಸಿ ಪತ್ನಿ ಉಮಾ ಹಾಗೂ ಆಕೆಯ ಫೆಸ್ಬುಕ್ ಸ್ನೇಹಿತರಾದ ಮಂಗಳೂರು ಮೂಲದ ಶೋಬೇಶ್ ಗೌಡ ಹಾಗೂ ಪವನ್ ಎಂಬಾತನನ್ನು ಬಂಧಿಸಿ ಪೊಲೀಸರು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅಕ್ಟೋಬರ್. 9 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎನ್ನಲಾದ ಉದ್ಯಮಿ ಸಂತೋಷ್ ಪದ್ಮಣ್ಣವರ್ ಅವರ ಸಾವಿನ ಹಿಂದೆ ಕಾಣದ ಕೈಗಳ ಕೈವಾಡ ಇದ್ದು ತಂದೆಯ ಸಾವಿನ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿ ಸಂಜನಾ
ಪದ್ಮಣ್ಣವರ್ ಬುಧವಾರ ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಮೃತ ಉದ್ಯಮಿ ಸಂತೋಷ್ ಪದ್ಮಣ್ಣವರ ಪತ್ನಿ ಉಮಾ ಪದ್ಮಣ್ಣವರ ಹಾಗೂ ಆಕೆಯ ಫೆಸ್ಬುಕ್ ಸ್ನೇಹಿತರಾದ ಮಂಗಳೂರಿನ ಶೋಬೇಶ್ ಗೌಡ ಹಾಗೂ ಪವನ್ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಉದ್ಯಮಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಸಂತೋಷ ಪತ್ನಿ ಉಮಾ ಸೇರಿ ಮೂವರನ್ನೂ ನ್ಯಾಯಾಧೀಶರ ಮುಂದೆ ಬೆಳಗಾವಿ ಮಾಳ ಮಾರುತಿ ಪೊಲೀಸರು ಹಾಜರುಪಡಿಸಲಾಯಿತು, ಆರೋಪಿಗಳನ್ನು ಹದಿನಾಲ್ಕು ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ ಹಿನ್ನಲೆಯಲ್ಲಿ ಹಿಂಡಲಗಾ ಜೈಲಿಗೆ ಆರೋಪಿ ಪತ್ನಿ ಉಮಾ, ಪೆಸ್ಬುಕ್ ಗೆಳೆಯ ಶೋಬೇಶ್ ಗೌಡ, ಪವನ್ ಮೂವರು ಶಿಪ್ಟ್ ಮಾಡಲಾಗಿದೆ.

ಪ್ರಕರಣ ದಾಖಲಿಸಿದ ಒಂದೇ ದಿನದಲ್ಲಿ ಕೊಲೆ ರಹಸ್ಯ ಬೇಧಿಸಿದ ಮಾಳಮಾರುತಿ ಠಾಣೆ ಸಿಬ್ಬಂದಿಗಳ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!