Select Page

Advertisement

ಮುರಗೋಡ ಪೊಲೀಸ್ ಇನ್ಸ್ಪೆಕ್ಟರ್ ಪೋಟೋ ಬಳಸಿ ಫರ್ನಿಚರ್ ಮಾರಾಟ ಯತ್ನ : ಪ್ರಕರಣ ದಾಖಲು

ಮುರಗೋಡ ಪೊಲೀಸ್ ಇನ್ಸ್ಪೆಕ್ಟರ್ ಪೋಟೋ ಬಳಸಿ ಫರ್ನಿಚರ್ ಮಾರಾಟ ಯತ್ನ : ಪ್ರಕರಣ ದಾಖಲು

ಬೆಳಗಾವಿ : ಪೊಲೀಸ್ ಇನ್ಸ್ಪೆಕ್ಟರ್ ಹೆಸರಿನ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿದ್ದು ಮಾತ್ರವಲ್ಲದೆ, ಅವರ ಪೋಟೋ ಬಳಸಿ ವಾಟ್ಸಪ್ ಮೂಲಕ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ಸವದತ್ತಿ ತಾಲೂಕಿನ ಮುರಗೋಡ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮೌನೇಶ್ವರ ಮಾಲಿ ಪಾಟೀಲ್ ಹೆಸರಿನ ನಕಲಿ ಫೇಸ್ಬುಕ್ ಅಕೌಂಟ್ ಜೊತೆಗೆ ಇವರ ಪೊಲೀಸ್ ಡ್ರೆಸ್ ಇದ್ದ ಪೋಟೋ ವಾಟ್ಸಪ್ ಡಿಪಿಯಾಗಿ ಬಳಸಿ ಜನರಿಂದ ಹಣ ಪಡೆಯಲು ಯತ್ನಿಸಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಸಧ್ಯ ಪ್ರಕರಣ ದಾಖಲಾಗಿದೆ.

ಪೊಲೀಸ್ ಅಧಿಕಾರಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿದ ಆರೋಪಿಗಳು ಜನರಿಗೆ ರಿಕ್ಟೆಸ್ಟ್ ಕಳುಹಿಸುತ್ತಿದ್ದರು. ನಂತರ ಇನ್ನೊಬ್ಬ ಸ್ನೇಹಿತನಿಂದ ನವೀನ ಸಿಂಗ್ ಹೆಸರಿನ ನಕಲಿ ವಾಟ್ಸಪ್ ಮೂಲಕ ಜನರಿಗೆ ನಾನು CISF ಅಧಿಕಾರಿ ಎಂದು ನಂಬಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಮುರಗೋಡ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಮೌನೇಶ್ವರ ಅವರ ಸಮವಸ್ತ್ರ ಇದ್ದ ಪೋಟೋ ಬಳಕೆ ಮಾಡಲಾಗಿದೆ.

ನಾನು CISF ಅಧಿಕಾರಿ ಆಗಿದ್ದು ಬೇರೆ ಕಡೆ ವರ್ಗಾವಣೆ ಆಗಿದೆ. ಈ ಕಾರಣದಿಂದ ನನ್ನ ಮನೆಯ ಪರ್ನಿಚರ್ ಮಾರಾಟ ಮಾಡುತ್ತಿದ್ದು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿ ಹಣ ಪಡೆಯಲು ಯತ್ನ ನಡೆದಿದೆ. ಈ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು ಐಟಿ ಆ್ಯಕ್ಟ್ 420 ಐಪಿಸಿ ಅಡಿಯಲ್ಲಿ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!