Select Page

Advertisement

ವಿದ್ಯಾಭ್ಯಾಸ ಮಾಡು ಎಂದು ಬೈದ ಪೋಷಕರು ; ಮನನೊಂದ ಬಾಲಕ ಆತ್ಮಹತ್ಯೆಗೆ ಶರಣು

ವಿದ್ಯಾಭ್ಯಾಸ ಮಾಡು ಎಂದು ಬೈದ ಪೋಷಕರು ; ಮನನೊಂದ ಬಾಲಕ ಆತ್ಮಹತ್ಯೆಗೆ ಶರಣು

ಮೂಡಲಗಿ :  ದೀಪಾವಳಿ ರಜೆ ಇದೆ ಅಂತ ಹಾಗೆ ತಿರುಗಬೇಡ  ಓದಿಕೋ ಎಂದು ತಾಯಿ ಹೇಳಿದ್ದಕ್ಕೆ ಮನನೊಂದು ಮಗ ಆತ್ಮಹತ್ಯೆ ಮಾಡಿಕೊಂಡು  ಸಾವಿಗೆ ಶರಣಾದ ಘಟನೆ ಪಟ್ಟಣದ ದೇಶಪಾಂಡೆ ಫ್ಲಾಟದಲ್ಲಿ ಸೋಮವಾರ ನಡೆದಿದೆ.

ಇನ್ನು ಒಂದು ದಿನದಲ್ಲಿ ಶಾಲೆ ಪ್ರಾರಂಭವಾಗುತ್ತದೆ. ಸರಿಯಾಗಿ ಓದಿಕೊ ಎಂದು ತಾಯಿ ಬುದ್ಧಿವಾದ ಹೇಳಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

14 ವರ್ಷದ ಸಮರ್ಥ್ ಸುರೇಶ್ ಭಜಂತ್ರಿ ಆತ್ಮಹತ್ಯೆ ಮಾಡಿಕೊಂಡ ಬಾಲಕ ಪಟ್ಟಣದ ಖಾಸಗಿ ಶಾಲೆಯಲ್ಲಿ  8ನೇ ತರಗತಿ ಓದುತ್ತಿದ್ದು ಎಂದು ತಿಳಿದು ಬಂದಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತಿಚಿನ ದಿನಗಳಲ್ಲಿ ಯುವ ಜನತೆ ಸಣ್ಣ ಸಣ್ಣ ವಿಷಯನ್ನೇ ಮನಸ್ಸಿಗೆ ಹಚ್ಚಿಕೊಂಡು ಸಾವಿಗೆ ಶರಣಾಗುತ್ತಿರುವ ಪ್ರಕರಣ ಹೆಚ್ಚುತ್ತಿರುವುದು ವಿಪರ್ಯಾಸವೇ ಸರಿ.

Advertisement

Leave a reply

Your email address will not be published. Required fields are marked *

error: Content is protected !!