Select Page

Advertisement

ನಾನು ಕೇವಲ 22 ದಿನದಲ್ಲಿ ಕನ್ನಡ ಕಲಿತೆ ; ನಿಮಗೇಕೆ ಸಾಧ್ಯವಿಲ್ಲ..? ವಿಟಿಯು ನಲ್ಲಿ ಕನ್ನಡ ಬುತ್ತಿ ಬಿಚ್ಚಿಟ್ಟ ಬೆಳಗಾವಿ ಡಿಸಿ

ನಾನು ಕೇವಲ 22 ದಿನದಲ್ಲಿ ಕನ್ನಡ ಕಲಿತೆ ; ನಿಮಗೇಕೆ ಸಾಧ್ಯವಿಲ್ಲ..? ವಿಟಿಯು ನಲ್ಲಿ ಕನ್ನಡ ಬುತ್ತಿ ಬಿಚ್ಚಿಟ್ಟ ಬೆಳಗಾವಿ ಡಿಸಿ

ಬೆಳಗಾವಿ : ಹೊಸ ಭಾಷೆ ಕಲಿಯುವುದೆಂದರೆ ಬದುಕಿಗೆ ಹೊಸ ಅರ್ಥ ಪಡೆದುಕೊಂಡಂತೆ.‌ ನಾನು ಮೂಲತಃ ಹೈದರಾಬಾದ್ ರಾಜ್ಯದವನಾರದರೂ ಕನ್ನಡ ಭಾಷೆಯನ್ನು ಕೇವಲ 22 ದಿನಗಳಲ್ಲಿ ಕಲಿತಿರುವೆ. ಕನ್ನಡ ಭಾಷಾ ಶ್ರೀಮಂತಿಕೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಭಿಪ್ರಾಯಪಟ್ಟರು.

ಗುರುವಾರ ನಗರದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸುವರ್ಣ ಕರ್ನಾಟಕ ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಇವರು, ನನಗೆ ಕನ್ನಡ ಮಾತೃಭಾಷೆಯಂತಾಗಿದೆ. ಕೇವಲ 22 ದಿನಗಳಲ್ಲಿ ಕನ್ನಡ ಕಲಿತಿರುವೆ. ಹೊರ ಭಾಗದ ಯುವಕರು ಮೂರು ತಿಂಗಳಲ್ಲಿ ಭಾಷೆ ಕಲಿಯಲು ಯಾಕೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಕನ್ನಡ ಭಾಷೆ ಬಳಸುವಂತೆ ಕಿವಿಮಾತು ಹೇಳಿದರು.

ನಮ್ಮ ಭಾಷೆಯಲ್ಲಿ ಬಳಕೆಗೆ ಪದಗಳು ಲಭ್ಯವಿಲ್ಲದಿದ್ದರೆ, ನಾವು ಇತರ ಭಾಷೆಯ ಪದಗಳನ್ನು ಬಳಸಬಹುದು. ಹೊಸ ಪದಗಳನ್ನು ನಮ್ಮ ಮಾತೃಭಾಷೆಯೊಂದಿಗೆ ಸಂಯೋಜಿಸಬಹುದು. ಆದರೆ ಅನ್ಯ ಭಾಷೆಯ ಬಳಕೆ ನಮ್ಮ ಭಾಷೆಯ ಸೌಂದರ್ಯವನ್ನು ಹಾಳು ಮಾಡಬಾರದು. ಅವರು ಭಾರತ ದೇಶ ವಿಭಿನ್ನ ಸಂಸ್ಕೃತಿಗಳ ಸಮ್ಮಿಲನವಾಗಿದೆ, ಕರ್ನಾಟಕವು ಅನೇಕ ಪ್ರಪಂಚಗಳನ್ನೇ ಹೊಂದಿರುವ ಒಂದು ರಾಜ್ಯವಾಗಿದ್ದೆ ಎಂದು ಕನ್ನಡ ನಾಡಿನ ಸೊಬಗನ್ನು ಜಿಲ್ಲಾಧಿಕಾರಿ ಕಟ್ಟಿಕೊಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರೊ.‌ ವಿದ್ಯಾಶಂಕರ ಎಸ್. ಮಾತನಾಡಿ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ತುಂಬಾ ಮುಖ್ಯ. ಆಳವಾದ ಅಧ್ಯಯನಕ್ಕೆ ಇದು ಸಹಕಾರಿ ಆಗುತ್ತದೆ. ಮಾತೃಭಾಷೆ ಹೃದಯದ ಭಾಷೆ. ಮಾತೃಭಾಷೆಯಲ್ಲಿ ಯಾವುದಾದರು ವಿಷಯವನ್ನು ಯಾರಾದರೂ ಕಲಿತರೆ ಅದು ಚೆನ್ನಾಗಿ ಅರ್ಥವಾಗುತ್ತದೆ ಮತ್ತು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಮಾತೃಭಾಷೆ ವಿಷಯದ ಜ್ಞಾನದ ಜೊತೆಗೆ ಕೌಶಲ್ಯವನ್ನು ಕಲಿಸುತ್ತದೆ. ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣ ಅನುಷ್ಠಾನದಲ್ಲಿ ಎಐಸಿಟಿಇ ಜೊತೆ ವಿಶ್ವವಿದ್ಯಾಲಯ ನಡೆಸಿರುವ ಪ್ರಯತ್ನದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಡೊಳ್ಳು ಕುಣಿತ, ಕರಡಿ ಮಜಲು ಹಾಗೂ ವೀರಗಾಸೆ ಮೂಲಕ ಕಲಾತಂಡಗಳು‌ ಕಾರ್ಯಕ್ರಮದ ಮೆರುಗು ಹೆಚ್ಚಿಸಿತ್ತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಾಳಾಸಾಹೇಬ್ ಲೋಕಾಪುರ್, ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾದ ಎಸ್.ಎಂ.ಚಲವಾದಿ ಮತ್ತು ಶ್ರೀಮತಿ ಯಮುನಾಬಾಯಿ ಕಲಾಚಂದ್ರ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗೌರವ ಅತಿಥಿ ಪ್ರೊ.ಸಿ.ಕೆ.ಸುಬ್ಬುರಾಯ ಮಾತನಾಡಿದರು, ಪ್ರೊ.ಬಿ.ಈ.ರಂಗಸ್ವಾಮಿ ಸ್ವಾಗತಿಸಿದರು, ಪ್ರೊ.ಟಿ.ಎನ್.ಶ್ರೀನಿವಾಸ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ “ಭೈರವ” ತಂಡದ ಹೆಸರಾಂತ ಕಲಾವಿದರು ಸಿತಾರ್ ಫ್ಯೂಷನ್ ವಾದ್ಯ ಗೋಷ್ಠಿ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಹಣಕಾಸು ಅಧಿಕಾರಿ ಡಾ.ಪ್ರಶಾಂತ ನಾಯಕ್ ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!