Select Page

Advertisement

ರೌಡಿ ನಿಪನಾಳ ವಿರುದ್ಧ ಕಂಪ್ಲೆಂಟ್ ಯಾವಾಗ ; ಪೊಲೀಸರ ಕೈ, ಕಟ್ಟಿ ಹಾಕಿದ್ಯಾರು…?

ರೌಡಿ ನಿಪನಾಳ ವಿರುದ್ಧ ಕಂಪ್ಲೆಂಟ್ ಯಾವಾಗ ; ಪೊಲೀಸರ ಕೈ, ಕಟ್ಟಿ ಹಾಕಿದ್ಯಾರು…?

ಬೆಳಗಾವಿ : ನಾ ಡ್ರೈವರ ಹಾಡಿನ ಮೂಲಕ ಜಾನಪದ ಲೋಕದಲ್ಲಿ ಹೆಸರು ಮಾಡಿರುವ ರಾಯಬಾಗದ ಮಾಳು ನಿಪನಾಳನ ಕ್ರೌರ್ಯದ ಮೂಖ ಬಯಲಾಗಿದೆ. ಮಹಿಳೆ ಹಾಗೂ ಓರ್ವ ವ್ಯಕ್ತಿಯು ಮೇಲೆ ಹಲ್ಲೆ ನಡೆದು ಒಂದು ದಿನ ಕಳೆದರೂ ಇನ್ನೂ ಆರೋಪಿ ವಿರುದ್ಧ ಪ್ರಕರಣ ದಾಖಲಾಗದಿರುವುದಕ್ಕೆ ಹಲವು ಅನುಮಾನ ಹುಟ್ಟುಹಾಕಿದೆ.

ರೌಡಿ ಮಾಳು ನಿಪನಾಳ ಹಾಗೂ ಆತನ ಗ್ಯಾಂಗ್ ವಿರುದ್ಧ ಇದೇ ಮೊದಲಬಾರಿಗೆ ಆರೋಪ ಕೇಳಿಬಂದಿಲ್ಲ. ಈ ಹಿಂದೆಯೂ ಕಲಾವಿದರ ತಂಡದ ಮೇಲೆ ಹಲ್ಲೆ ನಡೆಸಿದ್ದ. ಆದರೆ ಈಗ ಮಹಿಳೆ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದರು ಈವರೆಗೂ ಪ್ರಕರಣ ದಾಖಲಾಗಿಲ್ಲ. ಹಲ್ಲೆಗೊಳಗಾದವರು ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದು ಇದಕ್ಕೆ ಕಾಣದ ಕೈಗಳ ಕೆಲಸ ಮಾಡುತ್ತಿವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಸಾಮಾನ್ಯವಾಗಿ ಜನರ ಹಿತದೃಷ್ಟಿಯಿಂದ ಹಲ್ಲೆಗೊಳಗಾದವರು ಪ್ರಕರಣ ದಾಖಲಿಸದಿದ್ದರೆ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುವ ಅವಕಾಶ ಇದೆ. ಈ ರೀತಿ ರಾಜಾರೋಷವಾಗಿ ಜನರನ್ನು ಹೊಡೆದು ದಬ್ಬಾಳಿಕೆ ಮಾಡುವ ಗ್ಯಾಂಗ್ ವಿರುದ್ಧ ಇನ್ನೂ ಯಾಕೆ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬ ಅನುಮಾನ ಮೂಡಿದೆ.

ಪ್ರಕರಣದ ಕುರಿತು ಮಾತನಾಡಿದ ರಾಯಬಾಗ ವಲಯದ ಡಿವೈಎಸ್ಪಿ. ಹಲ್ಲೆಗೊಳಗಾದವರು ಇಂದು ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಒಂದುವೇಳೆ ಅವರು ಕಂಪ್ಲೆಂಟ್ ನೀಡದ ಸಂದರ್ಭದಲ್ಲಿ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೆದ್ ಅವರು. ಜಾನಪದ ಕಲಾವಿದ ಮಾಳು ನಿಪನಾಳ ಎಂಬಾತ ಯಾವುದೋ ವಿಚಾರವಾಗಿ ಕೆಲಸವ ಮೇಲೆ ಹಲ್ಲೆ ಮಾಡಿರುವಂತದ್ದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ಈತ ಹಲ್ಲೆ ಮಾಡಿದ್ದು ಮೇಲ್ನೋಟಕ್ಕೆ ‌ನಿಜವಾಗಿದೆ.

ಈ ಪ್ರಕರಣದಲ್ಲಿ ನೊಂದ ಶೇಕಪ್ಪ ಹಕ್ಯಾಗೋಳ ಹಾಗೂ ಆತನ ಸಂಬಂಧಿಕರು ಚಿಕ್ಕೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ನೊಂದವರಿಗೆ ನಮ್ಮ ಪೊಲೀಸರು ಪೋನ್ ಮುಖಾಂತರ ಈ ಕುರಿತು ಪ್ರಕರಣ ದಾಖಲಿಸುವಂತೆ ಹೇಳಿದ್ದಾರೆ. ಅವರು ಸಧ್ಯ ನಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಮೇಲೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.

ಯಾರೂ ಕಾನೂನಿಗಿಂತ ಮೇಲಿನವರಲ್ಲ.‌ಯಾರೇ ಆಗಲಿ‌ ಕಾನೂನು ತಮ್ಮ‌ ಕೈಗೆ ತಗೆದುಕೊಂಡರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆ ನೀಡುತ್ತೇವೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ್ ಅಭಿಪ್ರಾಯಪಟ್ಟರು.

ಏನಿದು ಪ್ರಕರಣ….? ಸೋಶಿಯಲ್ ಮೀಡಿಯಾದಲ್ಲಿ ಸ್ವಲ್ಪ ಹೆಸರು ಮಾಡಿದರೆ ಸಾಕು, ಸೊಕ್ಕು ನೆತ್ತಿಗೇರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ನಾ ಡ್ರೈವರ ಹಾಡಿನ ಮೂಲಕ ಹೆಸರು ಮಾಡಿದ್ದ ಮಾಳು ನಿಪನಾಳ ವಿರುದ್ಧ ಮಹಿಳೆ ಹಾಗೂ ಓರ್ವ ಯುವಕನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಹೊರವಲಯದಲ್ಲಿ ಯುವಕ ಹಾಗೂ ಆತನ ಸಹೋದರಿ ಬೈಕ್ ಮೇಲೆ ಸಂಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಗಾಯಕ ಮಾಳು ನಿಪನಾಳ ಹಾಗೂ ಆತನ ಸ್ನೇಹಿತರು ಕಾರಿನಲ್ಲಿ ತೆರಳುವ ಸಂದರ್ಭದಲ್ಲಿ ಎದುರಿಗಿದ್ದ ಯುವಕನ ಬೈಕ್ ಮೈಮೇಲೆ ಹಾಕುವಂತೆ ಕಾರು ಓಡಿಸಿಸುತ್ತಿದ್ದರು.

ಈ ಸಂದರ್ಭದಲ್ಲಿ ಬೈಕ್ ಮೇಲಿದ್ದ ಮಹಿಳೆ ನೋಡಿಕೊಂಡು ಸಂಚರಿಸಿ ಎಂದು ಹೇಳುತ್ತಿದ್ದಂತೆ ಮಾಳು ನಿಪನಾಳ ಹಾಗೂ ಆತನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ಇದರಿಂದ ವ್ಯಕ್ತಿಯ ತಲೆಗೆ ಗಂಭೀರವಾಗಿ ಗಾಯವಾಗಿದ್ದು ಯುವಕ ಹಾಗೂ ಆತನ ಸಹೋದರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಾವಕಾಶವಾಗಿ ಕಾರು ಓಡಿಸಿ ಎಂದು ಹೇಳಿದ್ದೇ ತಡ, ಆರೋಪಿಗಳು ಹಲ್ಲೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣಕ್ಕೂ ಮೊದಲು ಗಾಯಕ ಮಾಳು ನಿಪನಾಳ ಮೇಲೆ ಮೂರು ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!