Select Page

Advertisement

ಲಕ್ಷ್ಮಣ ಸವದಿ ಅಥಣಿಯನ್ನು ಬಿಹಾರ ಮಾಡಿದ್ದಾರೆ ; ಮಹೇಶ್ ಕುಮಠಳ್ಳಿ ಆಕ್ರೋಶ

ಲಕ್ಷ್ಮಣ ಸವದಿ ಅಥಣಿಯನ್ನು ಬಿಹಾರ ಮಾಡಿದ್ದಾರೆ ; ಮಹೇಶ್ ಕುಮಠಳ್ಳಿ ಆಕ್ರೋಶ




ಬೆಳಗಾವಿ : ಮೊದಲಿನಿಂದಲೂ ಲಕ್ಷ್ಮಣ ಸವದಿ ಅಥಣಿಯಲ್ಲಿ ದ್ವೇಷದ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಮೊದಲು ಯಾರಿಂದಾದರು ಹಲ್ಲೆ ಮಾಡಿಸುತ್ತಿದ್ದರು ಈಗ ಅವರೇ ಮಾಡುತ್ತಿದ್ದಾರೆ. ಒಬ್ಬ ಶಾಸಕರಾಗಿ ಡಿಸಿಸಿ ಬ್ಯಾಂಕ್ ನೌಕರನ ಮೇಲೆ‌ ಹಲ್ಲೆ ಮಾಡಿದ್ದು ಖಂಡಿಸುತ್ತೇನೆ. ಅಥಣಿ ಬಿಹಾರ ಆಗುತ್ತಿದೆ ಎಂದು ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಹೇಳಿದರು.

ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷನ ಮೇಲೆ ಶಾಸಕ ಸವದಿ ಬೆಂಬಲಿಗರ ಮಾರಣಾಂತಿಕ ಹಲ್ಲೆ ಖಂಡಿಸಿ ಮಾತನಾಡಿದರು. ತಮ್ಮ ಅಳಿಯನ ವರ್ಗಾವಣೆ ವಿಚಾರವಾಗಿ ಸಂಬಂಧವೇ ಇರದ ಡಿಸಿಸಿ ಬ್ಯಾಂಕ್ ನೌಕರನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.‌

ಲಕ್ಷ್ಮಣ ಸವದಿ ಮೊದಲಿನಿಂದಲೂ ದ್ವೇಷದ ರಾಜಕಾರಣ ಮಾಡುತ್ತಾರೆ. ಮಹಿಳೆಯರ ವರ್ಗಾವಣೆ ವಿಚಾರವಾಗಿ ಹಸ್ತಕ್ಷೇಪ ಮಾಡಿದ್ದಾರೆ. ಬಿಜೆಪಿ ಬೆಂಬಲಿಗರ ಕುಟುಂಬಕ್ಕೂ ಲಕ್ಷ್ಮಣ ಸವದಿ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದರು.

Advertisement

Leave a reply

Your email address will not be published. Required fields are marked *

error: Content is protected !!