Select Page

Advertisement

ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಚುನಾವಣೆ : ಭರ್ಜರಿ ಗೆಲುವು ಸಾಧಿಸಿದ ಮಹಾದೇವಪ್ಪ ಯಾದವಾಡ ಬಣ

ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಚುನಾವಣೆ : ಭರ್ಜರಿ ಗೆಲುವು ಸಾಧಿಸಿದ ಮಹಾದೇವಪ್ಪ ಯಾದವಾಡ ಬಣ
Advertisement

ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ್ದ ಖಾನಪೇಠ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಶಾಸಕ ಮಹಾದೇವಪ್ಪ‌ ಯಾದವಾ ಬಣ ಭರ್ಜರಿ ಗೆಲುವು ಸಾಧಿಸಿದೆ.

ಒಟ್ಟು 18 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ‌11 ಸ್ಥಾನ ಗೆದ್ದು ಯಾದವಾಡ ಬಣ ಅಧಿಕಾರ ಹಿಡಿದಿದೆ. ಇನ್ನೂ ( ಹಿರೆರಡ್ಡಿ ) ರೈತ ರಕ್ಷಣಾ ಸಮಿತಿ 7 ಸ್ಥಾನ ಗೆದ್ದುಕೊಂಡಿದೆ. ಒಟ್ಟು 19,423 ಮತದಾರರ ಪೈಕಿ 12,056 ಜನ ಮಾತ್ರ ಮತದಾನ ಮಾಡಿದ್ದರು.‌ ಮತ ಎಣಿಕೆ ಪ್ರಕ್ರಿಯೆ ಭಾನುವಾರ ತಡರಾತ್ರಿ ವರೆಗೆ ನಡೆಯಿತು.

ಭಾನುವಾರ ಮುಂಜಾನೆ 9 ಘಂಟೆಯಿಂದ ಆರಂಭವಾದ ಮತದಾನ ಪ್ರಕ್ರಿಯೆ, ಮಧ್ಯಾಹ್ನದ ವೇಳೆಗೆ ಮತದಾನ ವ್ಯವಸ್ಥೆ ಕಲ್ಪಿಸಿದ್ದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣ, ರಾಮದುರ್ಗ-ಸವದತ್ತಿ ಮುಖ್ಯ ರಸ್ತೆಯಲ್ಲಿ ಜನಂಗುಳಿ ಉಂಟಾಗಿ, ಗದ್ದಲದ ವಾತಾವರಣ ಸೃಷ್ಠಿಯಾಯಿತು. ರಾಮದುರ್ಗ ತಾಲೂಕು ಸೇರಿದಂತೆ ಸವದತ್ತಿ, ಗೋಕಾಕ, ಬೈಲಹೊಂಗಲ ಯರಗಟ್ಟಿ, ಮೂಡಲಗಿ, ಬದಾಮಿ ತಾಲೂಕುಗಳಿಂದ ಶೇರುದಾರರು ಆಗಮಿಸಿ, ತಮ್ಮ ಮತ ಚಲಾಯಿಅಭ್ಯರ್ಮತಗಳು

ಮಹಾದೇವಪ್ಪ ಯಾದವಾಡ ಪೆನೆಲ್ : ಮಹಾದೇವಪ್ಪ ಯಾದವಾಡ, ಮಲ್ಲಣ್ಣ ಯಾದವಾಡ, ಈರಪ್ಪ ಹರನಟ್ಟಿ, ಬಸವರಾಜ ತುಪ್ಪದ, ಭೀಮಪ್ಪ ಬೆಳವಣಕಿ, ಮಹಾದೇವ ಆತಾರ, ಶಶಿಕಲಾ ಸೋಮಗೊಂಡ, ಅನ್ನಪೂರ್ಣ ಪಾಟೀಲ್, ಶಿವಾನಂದ ಮುಷ್ಟಿಗೇರಿ, ಚಂದ್ರು ರಜಪೂತ, ಬಸವನಗೌಡ ಪಾಟೀಲ.

ರೈತ ಹಿತರಕ್ಷಣಾ ಸಮಿತಿ (ಹಿರೆರಡ್ಡಿ) ಪೆನೆಲ್ :‌ ಬಸವರಾಜ ಹಿರೆರಡ್ಡಿ, ಗೋಪಾಲರಡ್ಡಿ ಚಿಕರಡ್ಡಿ, ಪರತಗೌಡ ಪಾಟೀಲ್, ಈರಣ್ಣ ಕಾಮಣ್ಣವರ, ಭೀಮಪ್ಪ ಬಸಿಡೋಣಿ, ಬಸಪ್ಪ ಸಿದರಡ್ಡಿ.




Advertisement

Leave a reply

Your email address will not be published. Required fields are marked *

error: Content is protected !!