Select Page

Advertisement

50 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಉಪ ನಿಬಂಧಕರ ಕಚೇರಿ ಅಧೀಕ್ಷಕ

50 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಉಪ ನಿಬಂಧಕರ ಕಚೇರಿ ಅಧೀಕ್ಷಕ

ಬೆಳಗಾವಿ : ಸಂಘದ ನೋಂದಣಿ ಮಾಡಿಕೊಡಲು 50 ಸಾವಿರ ರೂ. ಗೆ ಬೇಡಿಕೆ ಇಟ್ಟಿದ್ದ ಬೆಳಗಾವಿ ಸಹಕಾರ ಸಂಘಗಳ‌ ಉಪನಿಬಂಧಕರ ಕಚೇರಿ ಅಧೀಕ್ಷಕ ಹಣ ಪಡೆಯುವ ವೇಳೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಅಧೀಕ್ಷಕ ಭರತೇಶ ಶೇಬನನ್ನವರ ಸಂಕೇಶ್ವರ ನಿವಾಸಿ ಪ್ರಶಾಂತ ಕೆಳಗಡೆ ಎಂಬುವವರ ಯುನೈಟೆಡ್ ಸೋಶಿಯಲ್ & ಸ್ಪೋರ್ಟ್ಸ್ ಕ್ಲಬ್ ಸಂಘವನ್ನು ನೋಂದಣಿ ಮಾಡಿಕೊಡಲು 50 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತ ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ‌ ನಡೆದ ದಾಳಿಯಲ್ಲಿ ಅಧಿಕಾರಿಗಳಾದ ಡಿಎಸ್ಪಿ ಬಿ.ಎಸ್ ಪಾಟೀಲ್, ಸಿಪಿಐ ನಿರಂಜನ ಪಟೀಲ್, ರವಿಕುಮಾರ್ ಧರ್ಮಟ್ಟಿ ಸೇರಿದಂತೆ ಅನೇಕರು ಇದ್ದರು.

Advertisement

Leave a reply

Your email address will not be published. Required fields are marked *

error: Content is protected !!