ಲಕ್ಷ್ಮಣ ಸವದಿ ಮೇಲಿನ ಜನರ ಪ್ರೀತಿಯೇ ಹಾಲಿ ನಿರ್ದೇಶಕರಿಗೆ ಶ್ರೀರಕ್ಷೆ…! ಅಭ್ಯರ್ಥಿಗಳ ವಿರುದ್ಧ ಒಳಗೊಳಗೆ ಅಸಮಾಧಾನ.?

ಬೆಳಗಾವಿ : ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣಾ ಕಣ ರಂಗೇರಿದೆ. ಇತ್ತ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬೆಂಬಲಿತ ಅಭ್ಯರ್ಥಿಗಳು ಕಣಕ್ಕಿಳಿದ್ದರೆ ಅತ್ತ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿತ ಮಹೇಶ್ ಕುಮಠಳ್ಳಿ ಬಣ ಅಖಾಡಕ್ಕಿಳಿದಿದೆ.
ನಿರಂತರವಾಗಿ ಕಳೆದ ಎರಡು ದಶಕಗಳಿಂದಲೂ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಚುಕ್ಕಾಣಿ ಲಕ್ಷ್ಮಣ ಸವದಿ ಅವರ ಸಂಬಂಧಿ ಪರಪ್ಪ ಸವದಿಯವರ ಕೈಯಲ್ಲಿದೆ. ಈ ಬಾರಿಯೂ ಹಾಲಿ ನಿರ್ದೇಶಕರನ್ನು ಚುನಾವಣಾ ಕಣಕ್ಕೆ ಇಳಿಸಿದ್ದು ಸಧ್ಯ ಎಲ್ಲೆಡೆ ಚರ್ಚಿತ ವಿಷಯವಾಗಿದೆ.
ಇದೇ ಬರುವ ಅ.26 ಕ್ಕೆ ಕೃಷ್ಣಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆ ಇದ್ದು 13 ಸ್ಥಾನಗಳ ಪೈಕಿ 12 ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇನ್ನುಳಿದ ಒಂದು ಕ್ಷೇತ್ರಕ್ಕೆ ಈಗಾಗಲೇ ಅವಿರೋಧ ಆಯ್ಕೆಯಾಗಿದೆ.
ಕಳೆದ ಎರಡು ದಶಕಗಳಿಂದ ಪರಪ್ಪ ಸವದಿ ನೇತೃತ್ವದಲ್ಲಿ ಕಾರ್ಖಾನೆ ಆಡಳಿತ ನಡೆಯುತ್ತಿದ್ದು ಹಳೇ ಎತ್ತುಗಳ ಕಾರ್ಯವೈಖರಿಗೆ ಜನ ಬೇಸತ್ತಿದ್ದಾರೆ. ಕೇವಲ ಶಾಸಕ ಲಕ್ಷ್ಮಣ ಸವದಿ ಅವರ ಮೇಲಿನ ಪ್ರೀತಿಯೇ ಹಾಲಿ ನಿರ್ದೇಶಕರಿಗೆ ಶ್ರೀರಕ್ಷೆಯಾಗಿದೆ.
ಜನರ ಜೊತೆಗೆ ಉತ್ತಮ ಒಡನಾಟ ಇಟ್ಟುಕೊಳ್ಳದಿರುವುದು. ರೈತರಿಗೆ ಸರಿಯಾಗಿ ಸ್ಪಂಧಿಸದಿರುವುದು. ಜೊತೆಗೆ ಆಡಳಿತ ವ್ಯವಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ನಡೆಸದಿರುವ ಆರೋಪ ಸಧ್ಯ ಹಾಕಿ ನಿರ್ದೇಶಕರ ಮೇಲಿದೆ. ಜನರೂ ಅನೇಕ ಬಾರಿ ತಮ್ಮ ಆಕ್ರೋಶ ಹೊರಹಾಕುವ ಪ್ರಯತ್ನ ಮಾಡಿದ್ದಾರೆ.
ಕೃಷ್ಣಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆಯಲ್ಲಿ
ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಅಭ್ಯರ್ಥಿಗಳ ವಿರುದ್ಧ ರೈತರು ಒಳಗೊಳಗೆ ಅಸಮಾಧಾನ ಹೊಂದಿದ್ದಾರೆ. ಕೇವಲ ಲಕ್ಷ್ಮಣ ಸವದಿ ಮೇಲಿನ ಪ್ರೀತಿಯೊಂದೇ ಜನರನ್ನು ಕುರುಡಾಗಿಸಿದೆ ಎಂಬ ಮಾತು ಅನೇಕ ಕಡೆ ಕೇಳಿಬರುತ್ತಿವೆ.
ಇನ್ನೂ ಇತ್ತ ಮಾಜಿ ಶಾಸಕ ಮಹೇಶ್ ಕುಮಠಳ್ಳಿ, ಶಹಾಜಾನ್ ಡೋಂಗರಗಾಂವ, ಕಾಂಗ್ರೆಸ್ ನಾಯಕ ಗಜಾನನ ಮಂಗಸೂಳಿ ನೇತೃತ್ವದ ಬಣ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಆಗಾಗ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಡುತ್ತಿರುವ ಮಾತುಗಳು ಈ ತಂಡಕ್ಕೆ ಹಿನ್ನಡೆ ಆಗುತ್ತಿದೆ ಎಂಬ ಮಾತೂ ಕ್ಷೇತ್ರದಲ್ಲಿ ಕೇಳಿಬರುತ್ತಿವೆ.
ಒಟ್ಟಿನಲ್ಲಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ರಂಗು ಪಡೆದಿದ್ದು ರೈತರು ಯಾವ ಬಣಕ್ಕೆ ಅಧಿಕಾರ ಗದ್ದುಗೆ ನೀಡುತ್ತಾರೆ ಎಂಬುದು ಬರುವ ಅ. 26 ರ ಸಂಜೆ ತಿಳಿದುಬರಲಿದೆ.


