ಲಕ್ಷ್ಮಣ ಸವದಿಗೆ ನನ್ನ ಭಯವಿದೆ : ರಮೇಶ್ ಜಾರಕಿಹೊಳಿ ವಾಗ್ದಾಳಿ

ಬೆಳಗಾವಿ : ಅಥಣಿಯ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ನಮ್ಮ ಬಣಕ್ಕೆ ಜನ ಆಶಿರ್ವಾದ ಮಾಡಿದರೆ ಅಮಿತ್ ಶಾ ಬಳಿ ಹೋಗಿ ಬಡ್ಡಿ ರಹಿತ ಸಾಲ ತಂದು ಕಾರ್ಖಾನೆಯನ್ನು ಸಾಲದಿಂದ ಮುಕ್ತಿಗೊಳಿಸುವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಅಥಣಿ ಪಟ್ಟಣದಲ್ಲಿ ಮಾತನಾಡಿದ ಇವರು. ಲಕ್ಷ್ಮಣ ಸವದಿ ಹಾಗೂ ಅವರ ತಂಡ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸಾಲದಲ್ಲಿ ಮುಳುಗಿಸಿದ್ದಾರೆ. ಜನ ಈ ಬಾರಿ ನಮ್ಮ ಬಣಕ್ಕೆ ಆಶಿರ್ವಾದ ಮಾಡಿದರೆ ಉತ್ತಮ ರೀತಿಯಲ್ಲಿ ಕಾರ್ಖಾನೆ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದರು.
ಲಕ್ಷ್ಮಣ ಸವದಿ ಬಿಜೆಪಿ ಪಕ್ಷದಲ್ಲಿ ಇದ್ದಿದ್ದರೆ ರಾಜ್ಯದ ದೊಡ್ಡ ನಾಯಕ ಆಗುತ್ತಿದ್ದ. ಈಗ ಮರಳಿ ಬಿಜೆಪಿಗೆ ಬರಲು ಯತ್ನ ನಡಿಸಿದ್ದು ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಬಂದರೆ ಆ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದನ್ನು ನೋಡುತ್ತೇನೆ ಎಂದರು.
ಡಿಸಿಸಿ ಚುನಾವಣೆಯಲ್ಲಿ ಮಹೇಶ್ ಕುಮಠಳ್ಳಿ ಸೋತಿರಬಹುದು ಆದರೆ ಈ ಭಾಗಕ್ಕೆ ಅವರೇ ನಿರ್ದೇಶಕ. ಸವದಿ ಕೇವಲ ಡಮ್ಮಿ. ಮಹೇಶ್ ಕುಮಠಳ್ಳಿ ಮಾತು ನಡೆಯುತ್ತದೆ ಎಂದರು.


