Select Page

Advertisement

ಜೋಡೆತ್ತು ಗೆಲ್ಲುವುದು ನಿಶ್ಚಿತ ; ಆಪ್ತ ಸ್ನೇಹಿತನ ಋಣ ತೀರಿಸುವ ಸಮಯ ಬಂದಿದೆ – ಲಕ್ಷ್ಮಣ ಸವದಿ

ಜೋಡೆತ್ತು ಗೆಲ್ಲುವುದು ನಿಶ್ಚಿತ ; ಆಪ್ತ ಸ್ನೇಹಿತನ ಋಣ ತೀರಿಸುವ ಸಮಯ ಬಂದಿದೆ – ಲಕ್ಷ್ಮಣ ಸವದಿ

ಬೆಳಗಾವಿ : ರಾಜು ಕಾಗೆ ಹಾಗೂ ನಾನು ಸೇರಿ ನಮ್ಮದೇ ಒಂದು ಬಣ ಮಾಡಿಕೊಂಡಿದ್ದೇವೆ. ನಮ್ಮ ಜೊತೆ ಯಾರು ಬರುತ್ತಾರೆ ಅವರನ್ನು ಸೇರಿಕೊಂಡು ಮುಂದೆ ಸಾಗುತ್ತೇವೆ. ನನ್ನ ಸಹಕಾರ ರಂಗಕ್ಕೆ ಕಳುಹಿಸಲು ಆಪ್ತ ಸ್ನೇಹಿತನ ಪಾತ್ರ ಅಧಿಕವಾಗಿದ್ದು ಆತನ ಋಣ ತೀರಿಸುವ ಸಮಯ ಬಂದಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.

ಶುಕ್ರವಾರ ನಗರದ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಅಥಣಿ ಹಾಗೂ ಕಾಗವಾಡ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ‌ನಾಮಪತ್ರ ಸಲ್ಲಿಸಿ‌ ಮಾತನಾಡಿದ ಇವರು. 1995 ರಲ್ಲಿ ನನ್ನನ್ನು ಡಿಸಿಸಿ ಬ್ಯಾಂಗ್ ಗೆ ಕಳಿಸಲು ರಾಜು ಕಾಗೆ ಬಹಳ ಮುಖ್ಯ‌. ಈ ಕಾರಣಕ್ಕೆ ಈಗ ಆತನ ಖುಣ ತೀರಿಸುವ ಸಮಯ ಬಂದಿದ್ದು ಜೋಡೆತ್ತು ಗೆದ್ದು ಬರುವ ವಿಶ್ವಾಸ ಇದೇ ಎಂದರು.

ಅಥಣಿ ಹಾಗೂ ಕಾಗವಾಡ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿ ಹಸ್ತಕ್ಷೇಪ ಮಾಡಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಇವರು. ಸೂರ್ಯ ಚಂದ್ರರಿಗೆ ಗ್ರಹಣಗಳು ಪ್ರತಿದಿನ ಹಿಡಿಯುವುದಿಲ್ಲ. ಗ್ರಹಣ ಬಂದ ಸಂದರ್ಭದಲ್ಲಿ ಪೂಜೆ ಪುನಸ್ಕಾರ ಇತ್ಯಾದಿ ಮಾಡಬೇಕಾಗುತ್ತದೆ. ಸೂರ್ಯ ಚಂದ್ರರಿಗೆ ಗ್ರಹಣ ಹಿಡಿದಾಗ ಅವರಿಗೆ ತೊಂದರೆ ಆಗಬಾರದು ಅಂತ ನಾವು ಪೂಜೆ ಪುನಸ್ಕಾರ ಮಾಡುತ್ತೇವೆ. ನಾಮಪತ್ರ ವಾಪಸ್ ಪಡೆಯುವವರೆಗೂ ನಾನು ಏನು ಹೇಳುವುದಿಲ್ಲ ನಂತರ ಈ ಕುರಿತು ಎಲ್ಲರಿಗೂ ತಿಳಿಯುತ್ತದೆ ಎಂದರು.

ಅಥಣಿ ಕ್ಷೇತ್ರದದಲ್ಲಿ 125 ಮತದಾರರಲ್ಲಿ 122 ಜನ ಬೆಂಬಲ ನೀಡಿದ್ದಾರೆ. ಕಾಗವಾಡ ಕ್ಷೇತ್ರದಲ್ಲಿ 20 ಕ್ಕೂ ಹೆಚ್ಚು ಮತದಾರರು ಬೆಂಬಲ ನೀಡಿದ್ದಾರೆ. ನಾವು ಯಾರಿಗೂ ಹಣ ಕೊಟ್ಟಿಲ್ಲ. ಮತ್ತೊಂದು ಕೊಟ್ಟಿಲ್ಲ ಕೇವಲ ಊಟ ಮಾಡಿಸಿದ್ದೇವೆ. ಕ್ಷೇತ್ರದ ಜನ ಜೋಡೆತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಬೇಕೆಂಬ ಆಸೆ ಹೊಂದಿದ್ದು ಅವರ ಆಶಿರ್ವಾದದಿಂದ ಗೆದ್ದು ಬರುವ ವಿಶ್ವಾಸ ಇದೆ ಎಂದರು.

ಈ ಸಂದರ್ಭದಲ್ಲಿ ಕಾಗವಾಡ ಶಾಸಕ ರಾಜು ಕಾಗೆ, ಕೃಷಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಮುಖಂಡರಾದ ಸುರೇಶ್ ಮಾಯಣ್ಣವರ, ಮಹಾದೇವ ಬಸಗೌಡರ್, ಚಿದಾನಂದ ಸವದಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Advertisement

Leave a reply

Your email address will not be published. Required fields are marked *

error: Content is protected !!