
ಅಕ್ರಮ ಆಸ್ತಿ ಸಂಪಾದನೆ ಹಿನ್ನಲೆ ಶ್ರೀಗಳ ಉಚ್ಚಾಟನೆ ; ಟ್ರಸ್ಟ್ ಗಂಭೀರ ಆರೋಪ…!

ಬೆಂಗಳೂರು : ರಾಜ್ಯದ ಪ್ರಬಲ ಪಂಚಮಸಾಲಿ ಸಮುದಾಯದ ಮೊದಲ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿಯವನ್ನು ಕೊನೆಗೂ ಪೀಠದಿಂದ ಉಚ್ಚಾಟನೆ ಮಾಡಲಾಗಿದೆ.
ಭಾನುವಾರ ನಡೆದ ಲಿಂಗಸಯತ ಪಂಚಮಸಾಲಿ ಟ್ರಸ್ಟ್ ಕಾರ್ಯಕಾರಣಿ ಸಭೆಯಲ್ಲಿ ಶ್ರೀಗಳನ್ನು ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಉಚ್ಚಾಟನೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಶ್ರೀಗಳ ಉಚ್ಚಾಟನೆ ಕುರಿತು ಅವರ ಮೇಲೆ ಗಂಭೀರ ಆಪಾದನೆ ಹೊರಿಸಲಾಗಿದೆ. ಸ್ವಾಮೀಜಿ ಸ್ವ ಆಸ್ತಿ ಮಾಡಿದ್ದಾರೆ. ದಾವಣಗೆರೆ ಸೇರಿದಂತೆ ಅನೇಕ ಕಡೆಗಳಲ್ಲಿ ಆಸ್ತಿ ಮಾಡಿದ್ದು ಒಂದು ಪಕ್ಷದ ಪರ ನಿಲುವು ಹೊಂದಿದ್ದಾರೆ ಎಂದು ಟ್ರಸ್ಟ್ ಆರೋಪಿಸಿದೆ.
ಶ್ರೀಗಳ ಉಚ್ಚಾಟನೆ ಹಿನ್ನಲೆಯಲ್ಲಿ ಸೋಮವಾರ ಕೂಡಸಂಗಮದ ಸೋಮೇಶ್ವರ ಉಚಿತ ಪ್ರಸಾದ ನಿಲಯದಲ್ಲಿ ಭಕ್ತರ ಸಭೆ ಕರೆಯಲಾಗಿದೆ. ಈ ಸಂದರ್ಭದಲ್ಲಿ ಶ್ರೀಗಳ ಉಚ್ಚಾಟನೆ ಹಿನ್ನಲೆಯಲ್ಲಿ ಬದಲಿ ವ್ಯವಸ್ಥೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.