ನಾಯಕತ್ವ ಬದಲಾವಣೆ ಕುರಿತು ಕೋಡಿಮಠ ಶ್ರೀ ಅಚ್ಚರಿ ಭವಿಷ್ಯ..!
ಬೆಳಗಾವಿ : ಹಾಲುಮತ ಸಮುದಾಯದಿಂದ ಅಧಿಕಾರ ಕಿತ್ತುಕೊಳ್ಳಲು ಆಗುವುದಿಲ್ಲ. ಸಿದ್ದರಾಮಯ್ಯ ತಮ್ಮ ಹುದ್ದೆ ಬಿಟ್ಟುಕೊಟ್ಟರೆ ಮಾತ್ರ ಅವಕಾಶ ಇದೆ ಇಲ್ಲದಿದ್ದರೆ ಸಾಧ್ಯವಿಲ್ಲ ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಭವಿಷ್ಯ ನುಡಿದಿದ್ದಾರೆ.
ಶನಿವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಸಿದ್ದರಾಮಯ್ಯ ಅವರೇ ಬಜೆಟ್ ಮಂಡನೆ ಮಾಡಲಿದ್ದಾರೆ. ಇದಾದ ನಂತರ ಅವರಾಗಿಯೇ ಅಧಿಕಾರ ಬಿಟ್ಟುಕೊಟ್ಟರೆ ಮಾತ್ರ ಅವಕಾಶ ಇರುತ್ತದೆ, ಇಲ್ಲವಾದರೆ ಅಸಾಧ್ಯ ಎಂದು ಹೇಳಿದರು.
ಈ ವರ್ಷಕ್ಕೆ ಹೋಲಿಸಿದರೆ ಮುಂಬರುವ ವರ್ಷಗಳಲ್ಲಿ ಸಾವು, ನೋವು ಹೆಚ್ಚಾಗಲಿವೆ. ಸಂಕಷ್ಟಗಳೂ ಬರಲಿವೆ. ಶೇ. 10 ರಷ್ಟು ಜಗತ್ತು ಮುಳಿಗಿ ಹೋಗುವ ಸಾಧ್ಯತೆಯೂ ಇದೆ. ಸಂಕಷ್ಟಗಳೂ ಬರಲಿವೆ ಎಂದು ಶ್ರೀಗಳು ಮಾರ್ಮಿಕವಾಗಿ ನುಡಿದರು.


