ಬೆಳಗಾವಿ : ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡು ಬೆಳಗಾವಿ ಜನರ ಚಿರಪರಿಚಿತ ವ್ಯಕ್ತಿಯಾಗಿದ್ದ ಯುವಕ ಕಿರಣ ನಿಪ್ಪಾಣಿಕರ್ (47) ನಿಧನರಾಗಿದ್ದಾರೆ.

ಐತಿಹಾಸಿಕ ಮಹಾಕುಂಭಮೇಳಕ್ಕೆ ತೆರಳಿದ್ದ ವೇಳೆ ಹೃದಯಾಘಾತ ಸಂಭವಿಸಿದೆ. ಕಿರಣ ಅವರ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.