ಆರೋಪಿಗಳನ್ನು ಬಂಧಿಸಲು ಹೋಗಿ ಲಂಚ ಪಡೆದು ಸಿಕ್ಕಿಬಿದ್ದ ಪೊಲೀಸರು
ಬೆಂಗಳೂರು : ವಂಚನೆ ಆರೋಪಿಗಳನ್ನು ಹಿಡಿಯಲು ಕೇರಳಕ್ಕೆ ತೆರಳಿದ್ದ ಕರ್ನಾಟಕದ ನಾಲ್ವರು ಪೊಲೀಸರು ಆರೋಪಿತರಿಂದ ಲಂಚ ಪಡೆದ ಪ್ರಕರಣಕ್ಕ ಬೆಳಕಿಗೆ ಬಂದಿದ್ದು, ಕೇರಳ ಪೊಲೀಸರು ರಾಜ್ಯ ನಾಲ್ವರು ಪೊಲೀಸರನ್ನು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕದಲ್ಲಿ ವಂಚನೆ ಆರೋಪದ ಮೇಲೆ ನಾಲ್ವರನ್ನು ಬಂಧಿಸಲು ಕೇರಳದ ಕೊಚ್ಚಿಗೆ ರಾಜ್ಯದ ಪೊಲೀಸರು ತೆರಳಿದ್ದರು. ಅಲ್ಲಿ ಆರೋಪಿಗಳನ್ನು ಬಂಧಿಸದೆ ಅವರಿಂದ 3.95 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ಅರೋಪ ಬಂದಿದ್ದು, ದೂರಿನ ಅನ್ವಯ ಕೊಚ್ಚಿಯ ಪೊಲೀಸರು ನಾಲ್ಚರು ಕರ್ನಾಟಕ ಪೊಲೀಸರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಬೆಂಗಳೂರಿನ ವೈಟ್ ಫೀಲ್ಡ್ ನಿಂದ ಈ ಪೊಲೀಸರು ತೆರಳಿದ್ದರು ಎಂದು ತಿಳಿದುಬಂದಿದೆ. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರ ಜೊತೆ ಕೇರಳ ಪೊಲೀಸರು ಸಂಪರ್ಕದಲ್ಲಿದ್ದಾರೆ.

