Select Page

Advertisement

ಬೆಳಗಾವಿಯ ಇಬ್ಬರು ಶಾಸಕರಿಗೆ ನಿಗಮ ಮಂಡಳಿ – ನಿಜವಾಯ್ತು ಬೆಳಗಾವಿ ವಾಯ್ಸ್ ಸುದ್ದಿ

ಬೆಳಗಾವಿಯ ಇಬ್ಬರು ಶಾಸಕರಿಗೆ ನಿಗಮ ಮಂಡಳಿ – ನಿಜವಾಯ್ತು ಬೆಳಗಾವಿ ವಾಯ್ಸ್ ಸುದ್ದಿ

ಬೆಂಗಳೂರು : 32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದ್ದು, ಅದರಂತೆ ಬೆಳಗಾವಿಯ ಇಬ್ಬರು ಶಾಸಕರಿಗೆ ನಿಗಮ‌ ಮಂಡಳಿ ನೀಡುವ ಕುರಿತು ಬೆಳಗಾವಿ ವೈಸ್ ಸುದ್ದಿ ನಿಜವಾಗಿದೆ.

ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ ಅವರಿಗೆ ಕರ್ನಾಟಕ ಹಣಕಾಸು ನಿಗಮ ಹುದ್ದೆ ನೀಡಲಾಗಿದೆ. ಕಾಂಗ್ರೆಸ್ ಹಿರಿಯ ಶಾಸಕರಲ್ಲಿ ಒಬ್ಬರಾದ ಮಹಾಂತೇಶ್ ಕೌಜಲಗಿ ಸಚಿವಸ್ಥಾನದ ಆಸೆ ಹೊಂದಿದ್ದರು. ಸಧ್ಯ ನಿಗಮ ಮಂಡಳಿಗೆ ಪರಿಗಣಿಸಲಾಗಿದೆ.

ಕಾಗವಾಡ ಶಾಸಕ ರಾಜು ಕಾಗೆ ಅವರಿಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಈ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ರಾಜು ಕಾಗೆ ಅವರು ಹಿರಿಯ ಶಾಸಕರಲ್ಲಿ ಒಬ್ಬರು.

ಇನ್ನೂ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಯಲ್ಲಿ ‌ಪ್ರಮುಖವಾಗಿ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಅರಸೀಕೆರೆ ಶಾಸಕ ಶಿವಲಿಂಗೆಗೌಡ, ಬಾಗಲಕೋಟೆ ಶಾಸಕ ಹೆಚ್ ವೈ ಮೇಟಿ, ಮುದ್ದೆಬಿಹಾಳ ಶಾಸಕ ಅಪ್ಪಾಜಿ ನಾಡಗೌಡ, ಕೆಜಿಎಫ್ ಶಾಸಕಿ ರೂಪಕಲಾ ಇದ್ದಾರೆ.

ಇನ್ನೂ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಹು,ಧಾ ಪೂರ್ವ ಶಾಸಕ ಪ್ರಸಾದ್ ಅಬ್ಬಯ್ಯ, ಹಾನಗಲ್ ಶಾಸಕ‌ ಶ್ರೀನಿವಾಸ ಮಾನೆ, ಕಂಪ್ಲಿ ಗಣೇಶ್, ಆನೆಕಲ್ ಶಾಸಕ ಬಿ. ಶಿವಣ್ಣ ಸೇರಿದಂತೆ ಅನೇಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಒಟ್ಟು 32 ಶಾಸಕರಿಗೆ ನಿಗಮ‌‌ ಮಂಡಳಿ ಸ್ಥಾನ ಲಭಿಸಿದೆ.

Advertisement

Leave a reply

Your email address will not be published. Required fields are marked *

error: Content is protected !!