Select Page

Advertisement

ದೇವಲಾಪೂರದಲ್ಲಿ ಜೈನ ಮುನಿ ಅಂತ್ಯಕ್ರಿಯೆ

ದೇವಲಾಪೂರದಲ್ಲಿ ಜೈನ ಮುನಿ ಅಂತ್ಯಕ್ರಿಯೆ

ಬೈಲಹೊಂಗಲ : ಯಮಸಲ್ಲೇಖನ ವೃತ್ತ ಸ್ವೀಕರಿಸಿ ಬುಧವಾರ ಸಮಾಧಿ ಮರಣ ಹೊಂದಿದ ಜೈನ ಮುನಿ ಶ್ರೀ 108 ಜ್ಞಾನೇಶ್ವರ ಮುನಿ ಮಹಾರಾಜರ ಅಂತಿಮ ದಹನಕ್ರೀಯಾದಿ ಜೈನ ಸಮುದಾಯದ ವಿಧಿ ವಿಧಾನಗಳ ಮೂಲಕ ಗುರುವಾರ ತಾಲೂಕಿನ ದೇವಲಾಪೂರ ಗ್ರಾಮದ ಅಷ್ಟಮ ನಂದೀಶ್ವರ ಕ್ಷೇತ್ರದ ಸ್ಥಳದಲ್ಲಿ ನಡೆಯಿತು.

ನ.13 ರಂದು ಯಮಸಲ್ಲೇಖನ ವೃತ್ತ ಸ್ವೀಕರಿಸಿದ್ದ ಶ್ರೀ 108 ಜ್ಞಾನೇಶ್ವರ ಮುನಿ ಮಹಾರಾಜರು ತಮ್ಮ 86 ನೇ ವಯಸ್ಸಿನಲ್ಲಿ ಎಂಟು ದಿನಗಳ ನಂತರ ನ.20 ರಂದು ದೇವಲಾಪೂರ ಕ್ಷೇತ್ರದಲ್ಲಿ ಸಮಾಧಿ ಮರಣ ಹೊಂದಿದರು. ದೇಹದಹನ ಕಾರ್ಯವು ಪಟ್ಟಾಚಾರ್ಯ ಆಚಾರ್ಯ ಶ್ರೀ 108

ವಿಮಲೇಶ್ವರ ಮುನಿ ಮಹಾರಾಜರ ಸಾನಿಧ್ಯದಲ್ಲಿ ಪರಮಪೂಜ್ಯ 105 ಗಣನಿ ಆರ್ಯಿಕಾ ಜಿನವಾನಿ ಮಾತಾಜಿ, ಕ್ಷಲ್ಲಿಕಾ 105 ವಿಶುದ್ದಮತಿ ಮಾತಾಜಿ ಮತ್ತು ಕ್ಷಲ್ಲಿಕಾ 105 ಅಮೃತ ಜ್ಯೋತಿ ಮಾತಾಜಿ, ಕ್ಷಲ್ಲಿಕಾ 105 ಅಚಲಜ್ಯೋತಿ ಮಾತಾಜಿ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನಡೆಯಿತು.

ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಅಂತ್ಯಕ್ರಿಯೆ ಸ್ಥಳಕ್ಕೆ ತರಲಾಯಿತಲ್ಲದೇ, ಅವರ ದೇಹ ದಹನದ ವಿಧಿವಿಧಾನಗಳ ಕ್ರಿಯೆಯನ್ನು ಹರಾಜಿನ ಮೂಲಕ ಭಕ್ತರಿಗೆ ನೀಡಲಾಯಿತು.

ಮೂರುಸಾವಿರಮಠದ ಪ್ರಭುನೀಲಕಠ ಶ್ರೀ. ಕ ಡಾ.ವೇ.ಮೂ.ಮಹಾಂತೇಶಶಾಸ್ತ್ರೀ ಆರಾದ್ರಿಮಠ, ಬೇವಿನಕೊಪ್ಪ ಆನಂದಾಶ್ರಮದ ವಿಜಯಾನಂದ ಶ್ರೀಗಳು, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಮಾಜಿ ಸಚಿವ ಶಿವಾನಂದ ಕೌಜಲಗಿ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಸಂಜಯ ಪಾಟೀಲ,

ಮಹಾಂತೇಶ ದೊಡಗೌಡರ, ಜಗದೀಶ ಮೆಟಗುಡ್ಡ, ಯುವ ಮುಖಂಡೆ ಲಕ್ಷ್ಮೀ ಇನಾಮದಾರ, ನಾನಾಸಾಹೇಬ ಪಾಟೀಲ, ಕೆಪಿಸಿಸಿ ಸದಸ್ಯೆ ರೋಹಿಣ ಪಾಟೀಲ, ಎಫ್.ಎಸ್. ಸಿದ್ಧನಗೌಡರ, ಕಲಾವಿದ ಸಿ.ಕೆ.ಮೆಕ್ಕೇದ, ಸೇರಿದಂತೆ ಗಣ್ಯ-ಮಾನ್ಯರು ಸಂತಾಪ ವ್ಯಕ್ತಪಡಿಸಿದರು.

Advertisement

Leave a reply

Your email address will not be published. Required fields are marked *

error: Content is protected !!