ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟರಾ ಜಗದೀಶ್ ಶೆಟ್ಟರ್…? ಮಂಗಲಾ ಅಂಗಡಿ ಗೆ ಕೋಕ್ ನೀಡುತ್ತಾ ಬಿಜೆಪಿ..!
ಬೆಳಗಾವಿ : ತೀವ್ರ ಕುತೂಹಲ ಮೂಡಿಸಿರುವ ಮುಂಬರುವ ಲೋಕಸಭಾ ಚುನಾವಣೆ ಟಿಕೆಟ್ ಪಡೆಯಲು ಅನೇಕರು ಈಗಿನಿಂದಲೇ ಹರಸಾಹಸ ಪಡುತ್ತಿದ್ದಾರೆ. ಈ ನಡುವೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ( jagadish Shettar )/ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟರಾ ಎಂಬ ಮಾತು ಕೇಳಿಬರುತ್ತಿವೆ.
ಹೌದು ಈಗಾಗಲೇ ಮಾಜಿ ಕೇಂದ್ರ ಸಚಿವ ದಿ. ಸುರೇಶ್ ಅಂಗಡಿ ಅವರನ್ನ ಪತ್ನಿ ಮಂಗಲಾ ಅಂಗಡಿ ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಸತೀಶ್ ಜಾರಕಿಹೊಳಿ ವಿರುದ್ಧ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಸಧ್ಯ ಅವರನ್ನು ಈ ಬಾರಿ ಕಣಕ್ಕೆ ಇಳಿಸದಂತೆ ಬಿಜೆಪಿ ವಲಯದಲ್ಲಿ ಮಾತುಕತೆ ನಡೆದಿರುವ ಕುರಿತು ಕೆಲ ಊಹಾಪೋಹಗಳು ಜೋರಾಗಿವೆ. Suresh Angadi
ಈ ನಡುವೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸವತ್ತ ಗಮನ ಹರಿಸಿದ್ದಾರೆ ಎಂಬ ಮಾತು ಎಲ್ಲೆಡೆ ಜೋರಾಗಿವೆ. ಒಂದು ವೇಳೆ ಸಚಿವರಾದ ಲಕ್ಷ್ಮೀ ಹಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಇಬ್ಬರ ಒಪ್ಪಿಗೆ ಸಿಕ್ಕಿದ್ದೇ ಆದರೆ ಶೆಟ್ಟರ್ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಸಿಗುವ ಲಕ್ಷಣ ಇವೆ. Satish jarakiholi – Laxmi hebalkar
ಪ್ರಭಲ ವೀರಶೈವ ಲಿಂಗಾಯತ ಮತಗಳ ಪ್ರಾಭಲ್ಯ ಹೊಂದಿರುವ ಬೆಳಗಾವಿಯಲ್ಲಿ ಕಳೆದ ನಾಲ್ಕು ಚುನಾವಣೆಯಲ್ಲಿ ಬಿಜೆಪಿ ನಿರಂತರ ಗೆಲುವು ಸಾಧಸಿಸುತ್ತಾ ಬಂದಿದೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಕೆಲ ವಿಧಾನಸಭಾ ಕ್ಷೇತ್ರ ಕಳೆದುಕೊಂಡಿದ್ದು ಕಾಂಗ್ರೆಸ್ ಪ್ರಾಭಲ್ಯ ಮೆರೆಯುತ್ತಿದೆ. Belagavi
ಬೆಳಗಾವಿ ಲೋಕಸಭಾ ಚುನಾವಣಾ ಸ್ಪರ್ಧೇ ಕುರಿತು ಜಗದೀಶ್ ಶೆಟ್ಟರ್ ಅವರನ್ನು ಪ್ರಶ್ನಿಸಿದಾಗ. ಸಧ್ಯ ಲೋಕಸಭಾ ಚುನಾವಣೆ ಸ್ಪರ್ಧೇ ಕುರಿತು ಪಕ್ಷದ ವಲಯದಲ್ಲಿ ಯಾವುದೇ ರೀತಿಯ ಚರ್ಚೆಯಾಗಿಲ್ಲ. ಮುಂಬರುವ ದಿನಗಳಲ್ಲಿ ನಮ್ಮ ನಾಯಕರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದರು.


