ಲೋಕಾಪುರ – ಧಾರವಾಡ ಹೊಸ ರೈಲು ಓಡಿಸುವರಾ ಶೆಟ್ಟರ್ ; ದೆಹಲಿಯಲ್ಲಿ ಮಹತ್ವದ ಭೇಟಿ..!
ಬೆಳಗಾವಿ : ರೈತರ ಬಹುದಿನಗಳ ನಿರೀಕ್ಷೆಯಾಗಿರುವ ಲೋಕಾಪುರ – ಧಾರವಾಡ ಹೊಸ ರೈಲು ಮಾರ್ಗ ಪ್ರಾರಂಭಿಸುವಂತೆ ಆಗ್ರಹಿಸಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಂಸದ ಜಗದೀಶ್ ಶೆಟ್ಟರ್ ಮನವಿ ಸಲ್ಲಿಸಿದರು.
ಮಂಗಳವಾರ ದೆಹಲಿಯಲ್ಲಿ ಸಚಿವರ ರೈಲ್ವೆ ಭವನದ ಕಚೇರಿಗೆ ಭೇಟಿನೀಡಿ ನೂತನ ರೈಲು ಮಾರ್ಗ ಪ್ರಾರಂಭಿಸುವಂತೆ ಆಹ್ರಹಿಸಿದರು. 2019 ರಲ್ಲಿ ಪ್ರಸ್ತಾಪಿತ ರೈಲು ಮಾರ್ಗ ನಿರ್ಮಾಣಕ್ಕೆ ಪ್ರಾಥಮಿಕ ಹಂತದ ಸಮೀಕ್ಷೆ ಕಾರ್ಯವನ್ನು ರೈಲ್ವೆ ಇಲಾಖೆ ಕೈಗೊಂಡಿತ್ತು. ಆದರೆ ಈ ಮಾರ್ಗದಲ್ಲಿ ರೈಲ್ವೆ ಯೋಜನೆ ಅನುಷ್ಠಾನ ನಿರಾಕರಿಸಲಾಗಿತ್ತು. ಸವದತ್ತಿ, ರಾಮದುರ್ಗ ಜನರ ಬಹುದಿನಗಳ ಬೇಡಿಕೆಯಾಗಿದೆ.
ಬೆಂಗಳೂರು – ಧಾರವಾಡ ನಡುವೆ ಸದ್ಯ ಚಲಿಸುತ್ತಿರುವ ವಂದೇ ಭಾರತ ರೈಲು ಸಂಚಾರವನ್ನು ಬೆಳಗಾವಿ ನಗರದ ವರೆಗೆ ವಿಸ್ತರಿಸುವ ಕಿರಿಯ ಸಚಿವರಿಗೆ ಆಗ್ರಹಿಸಿದ್ದಾರೆ. ಇದಕ್ಕೆ ರೈಲ್ವೆ ಸಚಿವರಿಂದ ಪೂರಕ ವಿಶ್ವಾಸ ದೊರೆತಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


