Select Page

Advertisement

ಕರ್ನಾಟಕದ ಯುವ IPS ಅಧಿಕಾರಿ ಸಾವು ; ಕರ್ತವ್ಯಕ್ಕೆ ಹಾಜರಾಗುವ ದಿನವೆ ದೊಡ್ಡ ದುರಂತ

ಕರ್ನಾಟಕದ ಯುವ IPS ಅಧಿಕಾರಿ ಸಾವು ; ಕರ್ತವ್ಯಕ್ಕೆ ಹಾಜರಾಗುವ ದಿನವೆ ದೊಡ್ಡ ದುರಂತ

ಬೆಂಗಳೂರು : ಸಾವಿರ ಸಂಕಷ್ಟಗಳನ್ನು ಬದಿಗಿಟ್ಟು ಐಎಎಸ್ ಒಂದೇ ಗುರಿಯಲಿ ಓದಿ ನೌಕರಿ ಪಡೆಯುವ ವ್ಯಕ್ತಿ ಇನ್ನೇನು ಕೆಲಸಕ್ಕೆ ಹಾಜರಾಗಬೇಕು ಎನ್ನುವಷ್ಟರಲ್ಲಿ ವಿಧಿಯ ಆಟಕ್ಕೆ ಸಿಲುಕಿ ಇಹಲೋಕ ತ್ಯಜಿಸಿದ ಘಟನೆ ಈಗಷ್ಟೇ ನಡೆದಿದೆ.

ಮಧ್ಯಪ್ರದೇಶ ಮೂಲದ 2023 ರ ಐಪಿಎಸ್ ಅಧಿಕಾರಿ ಪ್ರೊಬೆಷನರಿ ಹುದ್ದೆ ಅಲಂಕರಿಸಲು ಹಾಸನ ಪೊಲೀಸ್ ವರಿಷ್ಠಾಧಿಕಾರಿ ‌ಕಚೇರಿಗೆ ಆಗಮಿಸುವ ಸಂದರ್ಭದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಹರ್ಷಬರ್ಧನ್ ಎಂಬುವವರು ಸಾವಣಪ್ಪಿದ್ದಾರೆ.

ಹಾಸನ ತಾಲ್ಲೂಕಿನ ಕಿತ್ತಾನೆ ಬಳಿ ಇಂದು ಪೊಲೀಸ್ ಜೀಪ್‌ನ ಟೈಯರ್ ಸಿಡಿದು ಅಪಘಾತ ಸಂಭವಿಸಿತ್ತು. ಜೀಪ್‌ನಲ್ಲಿದ್ದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಹಾಗೂ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಐಪಿಎಸ್ ಅಧಿಕಾರಿಹೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ.

ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 153ನೇ ರ್ಯಾಂಕ್ ಪಡೆದಿದ್ದ ಹರ್ಷಬರ್ಧನ್ ಅವರು ಮೈಸೂರಿನಲ್ಲಿದ್ದ ಕರ್ನಾಟಕ ಪೊಲೀಸ್ ಆಕಾಡೆಮಿಯಲ್ಲಿ ತರಬೇತಿ ಮುಗಿಸಿದ್ದರು. ಇಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಪ್ರೊಬೇಷನರಿ ಡಿವೈಎಸ್‌ಪಿಯಾಗಿ ರಿಪೋರ್ಟ್ ಮಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದು ಅಧಿಕಾರಿ ಸಾವಣಪ್ಪಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!