ಕಾಂಗ್ರೆಸ್ ತೆಕ್ಕೆಗೆ ಹುಕ್ಕೇರಿ ಪುರಸಭೆ
ಹುಕ್ಕೇರಿ : ಹುಕ್ಕೇರಿ ಪುರಸಭೆ ಎರಡನೇ ಅವಧಿಗೆ ಅಧ್ಯಕ್ಷರಾಗಿ
ಇಮ್ರಾನ್ ಮೋಮಿನ್ ಹಾಗೂ ಉಪಾಧ್ಯಕ್ಷರಾಗಿ ಜ್ಯೋತಿ ಬಡಿಗೇರ್ ಆಯ್ಕೆಯಾದರು.
ಸೋಮವಾರ ನಡೆದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡು ನಾಮಪತ್ರ ಸಲ್ಲಿಕೆಯಾಗಿದ್ದ ಕಾರಣ ಅವಿರೋಧವಾಗಿ ಆಯ್ಕೆಮಾಡಿ ಚುನಾವಣಾ ಅಧಿಕಾರಿ ಮಂಜುಳಾ ನಾಯಿಕ್ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಇಮ್ರಾನ್ ಮೋಮಿನ ಮಾತನಾಡಿ. ಕಾಂಗ್ರಸ್ ಪಕ್ಷದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಕ್ಕೆ ಈಗ ತಕ್ಕ ಪ್ರತಿಫಲ ದೊರೆತಿದೆ. ಸಚಿವ ಸತೀಶ ಜಾರಕಿಹೋಳಿ, ಸಂಸದೆ ಪ್ರೀಯಾಂಕಾ ಅವರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರಸ್ ಅಧ್ಯಕ್ಷ ವಿಜಯ ರವದಿ, ಪುರಸಭೆ ಸದಸ್ಯರಾದ ಆನಂದ ಗಂಧ, ಗಜಬೀರ್ ಮುಲ್ಲಾ, ರೇಖಾ ಲಚಿಕ್ಕೋಡಿ, ಸದಾಶಿವ ಕರೆಪ್ಪಗೋಳ, ಸುರೇಖಾ ಗಳತಿಮಠ, ಸಂಗೀತಾ ಹುಕ್ಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


