Select Page

Advertisement

ಗಂಡ್ಮಕ್ಳೆ ಹುಷಾರ್ ; ಬೆತ್ತಲಾಗಿ ಬದುಕು ಬರ್ಬಾದ್ ಮಾಡ್ತಾರೆ ಐನಾತಿಯರು…!

ಗಂಡ್ಮಕ್ಳೆ ಹುಷಾರ್ ; ಬೆತ್ತಲಾಗಿ ಬದುಕು ಬರ್ಬಾದ್ ಮಾಡ್ತಾರೆ ಐನಾತಿಯರು…!

ಧಾರವಾಡ : ಹನಿಟ್ರ್ಯಾಪ್ ಮೂಲಕ ಅಮಾಯಕರನ್ನು ಸುಲಿಗೆ ಮಾಡುತ್ತಿದ್ದ ಇಬ್ಬರು ಐನಾತಿ ಮಹಿಳೆಯರನ್ನು ಸೇರಿ ನಾಲ್ವರನ್ನು ಬಂಧಿಸುವಲ್ಲಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ.

ಪರ ಪುರುಷರರಿಗೆ ಕರೆ ಮಾಡಿ ಅವರ ಜೊತೆ ಸಲುಗೆಯಿಂದ ವರ್ತಿಸಿ ಲೈಂಗಿಕ ಪ್ರಕ್ರಿಯೆ ನಡೆಸುತ್ತಿದ್ದ ಮಹಿಳೆಯರು ಅದನ್ನು ವೀಡಿಯೋ ಮೂಲಕ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು. ನಂತರ ಇಬ್ಬರು ಪುರುಷರ ಜೊತ ಸೇರಿಕೊಂಡು ಖಾಸಗಿ ವೀಡಿಯೋ ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು.

ಧಾರವಾಡ ನಗರದ ನಿವಾಸಿಗಳಾದ ಆಕಾಶ್ ಉಪ್ಪಾರ, ಅಂಜು ಪರ್ವೀನ್, ರೇಣುಕಾ ಉಪ್ಪಾರ, ಮಲ್ಲಿಕ್ ಜಾನ್ ನದಾಫ ಬಂಧಿತ ಆರೋಪಿಗಳು. ಇವರೆಲ್ಲರೂ ಹನಿಟ್ರ್ಯಾಪ್ ‌ಮೂಲಕ ಹಣ ವಸೂಲಿ ಮಾಡುತ್ತಿದ್ದರು.

ಇವರಿಂದ ಒಂದು ಸ್ಕೋಡಾ ಕಾರು, 5.5 ಲಕ್ಷ ರೂ. ನಗದು, 85 ಗ್ರಾಂ ತೂಕದ 6.63 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು 14.73 ಲಕ್ಷ ಮೌಲ್ಯದ ವಸ್ತುಗಳ ಜೊತೆಗೆ ವಿವಿಧ ಕಂಪನಿಯ 4 ಮೊಬೈಲ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳು ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ರೈತನೊಂದಿಗೆ ಸಲುಗೆ ಬೆಳಸಿ ಆತನ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದಾರೆ. ನಂತರ ಇದನ್ನು ವೀಡಿಯೋ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ‌ ಹುಚ್ಚು ರೈತ ಲಕ್ಷಾಂತರ ಹಣ ನೀಡಿ ನಂತರ ಕೊಡಲು ಸಾಧ್ಯವಾದಗಿದ್ದಾಗ ಕೂಡಲೇ ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಈ ಐನಾತಿ ಗ್ಯಾಂಗ್ ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳು ಈವರೆಗೂ ಸುಮಾರು 80 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿದ್ದು ಎಂದು ಹೇಳಲಾಗುತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!