Select Page

Advertisement

ಬೆಳಗಾವಿಯ ಪ್ರತಿಷ್ಠಿತ ಶಬರಿ ಹೊಟೇಲ್ ಮಾಲಿಕ ಸುರೇಶ್ ನಾಯರಿ ನಿಧನ

ಬೆಳಗಾವಿಯ ಪ್ರತಿಷ್ಠಿತ ಶಬರಿ ಹೊಟೇಲ್ ಮಾಲಿಕ ಸುರೇಶ್ ನಾಯರಿ ನಿಧನ

ಬೆಳಗಾವಿ : ನಗರದ ಪ್ರತಿಷ್ಠಿತ ಹೊಟೇಲ್ ಉದ್ಯಮಿ ಹಾಗೂ ಶಬರಿ ಮತ್ತು ಹರ್ಷಾ ಹೊಟೇಲ್ ಮಾಲಿಕರಾದ ರಾಮತೀರ್ಥ ನಗರದ ನಿವಾಸಿ ಸುರೇಶ್ ನಾಯರಿ ( 52 ) ನಿಧನರಾಗಿದ್ದಾರೆ.

ಮೂಲತಃ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ನಿವಾಸಿಯಾಗಿದ್ದ ಇವರು ಕಳೆದ ಮೂರು ದಶಕಗಳಿಂದ ಬೆಳಗಾವಿಯಲ್ಲಿ ಹೊಟೇಲ್ ಉದ್ಯಮ ನಡೆಸಿಕೊಂಡು ಬಂದಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ನಿಧನಹೊಂದಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದಲ್ಲಿ ನ.‌ 14ರಂದು ಸಂಜೆ 4 ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

Leave a reply

Your email address will not be published. Required fields are marked *

error: Content is protected !!