ಸಂಕಷ್ಟದಲ್ಲಿ ಕೃಷ್ಣಾನದಿ ಪಾತ್ರದ ಜನ ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ..!

ಬೆಳಗಾವಿ : ಹಿಪ್ಪರಗಿ ಬ್ಯಾರೆಜಿನ 22 ನೇ ಗೇಟ್ ತುಂಡಾದ ಹಿನ್ನಲೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಹೋಗುತ್ತಿರುವ ಹಿನ್ನಲೆಯಲ್ಲಿ ಕೃಷ್ಣಾ ನದಿಯಲ್ಲಿ ಏಳು ಅಡಿಗಳಷ್ಟು ನೀರು ಇಳಿಕೆಯಾಗಿದೆ.
ಬೆಳಗಾವಿ ಹಾಗೂ ಬಾಗಲಕೋಟೆ ಗಡಿ ಭಾಗಕ್ಕೆ ಹೊಂದಿಕೊಂಡಂತೆ ಹಿಪ್ಪರಗಿ ಬಳಿ ಕೃಷಾ ನದಿಗೆ ಬ್ಯಾರೆಜ್ ನಿರ್ಮಾಣ ಮಾಡಲಾಗಿದ್ದು 6 ಎಟಿಎಂ ಸಾಮಥ್ರ್ಯ ಹೊಂದಿದೆ. ಸಧ್ಯ ಈ ಬಾರೇಜಿನ 22 ನೇ ಗೇಟ್ ತುಂಡಾದ ಹಿನ್ನಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ.
ಸಧ್ಯ ಕೃಷ್ಣಾ ನದಿಯಲ್ಲಿ 7 ಅಡಿಗಳಷ್ಟು ನೀರು ಇಳಿಕೆ ಕಂಡಿದೆ. ನದಿ ಪಾತ್ರದ, ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಕಾಗವಾಡ, ಅಥಣಿ ತಾಲೂಕಿನ ಹಲವು ಹಳ್ಳಿಗಳ ಜನರಿಗೆ ಸಂಕಷ್ಟ ಎದುರಾಗಿದೆ.
ಇನ್ನೂ ಗೇಟ್ ದುರಸ್ತಿ ಕಾರ್ಯದಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದು ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ಸುಮಾರು ಮೂರು ಟಿಎಂಸಿ ಗಿಂತಲೂ ಅಧಿಕ ನೀರು ಹರಿದು ಹೋಗುವ ಸಾಧ್ಯತೆ ಇದ್ದು ಬೇಸಿಗೆ ಸಂದರ್ಭದಲ್ಲಿ ಜನ ತೊಂದರೆ ಅನುಭವಿಸುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

