Select Page

Advertisement

Video – ಹಿಂದೂಗಳನ್ನು ಕೆಣಕಿದ್ರೆ ಕರ್ನಾಟಕ ಮತ್ತೊಂದು ಗೋದ್ರಾ ಆಗುತ್ತದೆ – ಸಿದ್ಧಲಿಂಗ ಶ್ರೀ

Video – ಹಿಂದೂಗಳನ್ನು ಕೆಣಕಿದ್ರೆ ಕರ್ನಾಟಕ ಮತ್ತೊಂದು ಗೋದ್ರಾ ಆಗುತ್ತದೆ –  ಸಿದ್ಧಲಿಂಗ ಶ್ರೀ

ಯಾದಗಿರಿ : ಕೆಲವರು ಮೊಂಡು ಕತ್ತಿ ಹಿಡಿದು ಹಿಂದುಗಳ‌ ಸಂಹಾರಕ್ಕೆ ಬರುತ್ತಾರೆ. ಅಂತವರಿಗೆ ಎಚ್ಚರ, ನಮ್ಮ ಬಳಿ ಛತ್ರಪತಿ ಶಿವಾಜಿ ಮಹಾರಾಜರ ಕತ್ತಿ ಇದೆ. ಹಿಂದುಗಳನ್ನು ಕೆಣಕಿದರೆ ಕರ್ನಾಟಕ ಮತ್ತೊಂದು ಗೋದ್ರಾ ಆಗುತ್ತದೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಹಾಗೂ ಆಂದೋಲ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ನಗರದಲ್ಲಿ ನಡೆದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣ ಮಾಡುತ್ತಿದ್ದ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಹಾಗೂ ಆಂದೋಲ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ , ಹಿಂದೂಗಳನ್ನು ಕೆಣಕಬೆಡಿ, ಕೆಣಕಿದ್ರೆ ಕರ್ನಾಟಕ ಎರಡನೇ ಗೋದ್ರಾ ಆಗುತ್ತದೆ ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ಆಗಿದೆ. ಜೊತೆಗೆ ಹಿಂದೂ ಮಹಿಳೆಯರಿಗೆ ನೀವು ಸುಮ್ನೆ ಇದ್ದರೆ ಸರಿ, ಇಲ್ಲವಾದರೆ ರೇಪ್ ಮಾಡ್ತೀವಿ ಅಂತಾ ಎಚ್ಚರಿಕೆ ಕೊಡ್ತಾರೆ. ಅಂತಹ ದುಷ್ಟ ಸಾಬ್ರೆ ನಿಮ್ಮ ಹತ್ರ ಮಂಡ್ ತಲ್ವಾರ್ ಇರಬಹುದು.

ಮಂಡ್ ತಲ್ವಾರ್ ನಿಂದ ಎದುರಿಸಲು ಬಂದ್ರೆ, ನಮ್ಮಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳ ಖಡ್ಗ, ಛತ್ರಪತಿ ಶಿವಾಜಿ ಖಡ್ಗವಿದೆ. ನಮ್ದೂ ಏಕ್ ಮಾರ್ ದೋ ತುಕಡಾ. ಒಂದು ಬಾರಿ ಹೊಡೆದ್ರೆ ಎರಡು ತುಕಡಿಯಾಗುತ್ತೀರಿ. ಒಂದು ದೇಹ ಪಾಕಿಸ್ತಾನಕ್ಕೆ ಹೋಗಬೇಕು. ಇನ್ನೊಂದು ದೇಹ ಬಾಂಗ್ಲಾದೇಶಕ್ಕೆ ಹೋಗಬೇಕು ಎಂದು ಆಕ್ರೋಶದ ಮಾತುಗಳನ್ನಾಡಿದ್ದಾರೆ.

ಹಿಂದೂ ಜಾಗೃತನಾದರೆ ಭಾರತ ಉಳಿಯಲು ಸಾಧ್ಯ. 2024ರಲ್ಲಿ ಮತ್ತೆ ಮೋದಿ ಅವರನ್ನು ಪಿಎಂ ಮಾಡಬೇಕು. ಮೋದಿ ಇಲ್ಲದೇ ಭಾರತವಿಲ್ಲ ಯತ್ನಾಳ್ ಇಲ್ಲದೇ ಕರ್ನಾಟಕವಿಲ್ಲ. ಪಾಕಿಸ್ತಾನಕ್ಕೆ ಸದೆ ಬಡಿಯುವ ನೇತಾರರು ಬೇಕಾಗಿದ್ದಾರೆ.

ಭಾರತ, ಹಿಂದೂ ಸುರಕ್ಷಿತವಾಗಿ ಇರಬೇಕಾದರೆ ಭಗತ್ ಸಿಂಗ್ ಹೇಳಿದ ಹಾಗೆ ಪ್ರತಿಯೊಬ್ಬರ ಮನೆಯಲ್ಲಿಯೂ ಬಂದೂಕು ಇಟ್ಟುಕೊಳ್ಳಬೇಕು. ಬಂದೂಕು ಮನೆಯಲ್ಲಿ ಇಟ್ಟುಕೊಂಡರೆ ಭಾರತ ಸುರಕ್ಷಿತವಾಗಿ ಇರುತ್ತದೆ ಎಂದಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!