
ಹಿಂಡಲಗಾ ಜೈಲಿನ ಮೇಲೆ ಅಧಿಕಾರಿಗಳ ದಾಳಿ ; ಚಾಕು, ಸಿಗರೇಟು ಸೇರಿ ಏನೆಲ್ಲ ಸಿಕ್ತು…?

ಬೆಳಗಾವಿ : ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ಅಧಿಕಾರಿಗಳ ತಂಡ ಬೆಳ್ಳಂ ಬೆಳಿಗ್ಗೆ ದಾಳಿ ನಡೆಸಿದ್ದು ಅನೇಕ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಮಡೆದಿದೆ.
ಶನಿವಾರ ಬೆಳಗಿನ ವೇಳೆಗೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಹಾಗೂ ಡಿಸಿಪಿ ರೋಹಣ್ ಸೇರಿದಂತೆ ಸುಮಾರು 40 ಅಧಿಕಾರಿಗಳು ಹಾಗೂ 220 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿತ್ತು.
ಈ ದಾಳಿ ವೇಳೆ ಹಿಂಡಲಗಾ ಜೈಲಿನಲ್ಲಿ ಮೂರು ಚಾಕು, ಹತ್ತು ತಂಬಾಕು ಚೀಟಿ, ಸಿಗರೇಟು, ಸಣ್ಣ ಹೀಟರ್ ವಯರ್ ಬಂಡಲ್ , ಹಾಗೂ ಎಲೆಕ್ಟ್ರಿಕಲ್ ಒಲೆ ಜಪ್ತಿ ಮಾಡಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.