Select Page

Advertisement

ಆರೋಗ್ಯ ಇಲಾಖೆಯಲ್ಲಿ 800 ಹುದ್ದೆ ಭರ್ತಿ – ಸಚಿವ ಗುಂಡೂರಾವ್

ಆರೋಗ್ಯ ಇಲಾಖೆಯಲ್ಲಿ 800 ಹುದ್ದೆ ಭರ್ತಿ – ಸಚಿವ ಗುಂಡೂರಾವ್

ಬೆಂಗಳೂರು‌ : ಆರೋಗ್ಯ ಇಲಾಖೆಯಲ್ಲಿ ಶೀಘ್ರವೇ 800 ತಂತ್ರಜ್ಞರು, ಶುಶ್ರೂಷಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಚಿವ ದಿನೇಶ ಗುಂಡೂರಾವ್‌ ಹೇಳಿಕೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವರು, ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದ್ದು, ಸದ್ಯದಲ್ಲಿಯೇ 800 ತಂತ್ರಜ್ಞರು, ಶುಶ್ರೂಷಕರನ್ನು ನೇಮಕ ಮಾಡಿಕೊಳ್ಳಲಾಗುವುದು .ಕೆಪಿಎಂಎ ಕಾಯ್ದೆ ಪ್ರಕಾರ ಖಾಸಗಿ ಆಸ್ಪತ್ರೆಗಳ ಚಿಕಿತ್ಸೆಗಳಿಗೆ ಸರ್ಕಾರ ಇಂತಿಷ್ಟು ದರ ನಿಗದಿಗೊಳಿಸಿದೆ.

ಆದರೆ ಬಹುತೇಕ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಕಾಣುವಂತೆ ಬೋರ್ಡ್‌ ಹಾಕಿಲ್ಲ. ರೋಗಿಗಳು ಚಿಕಿತ್ಸೆಗಾಗಿ ದಾಖಲಾದ ಸಂದರ್ಭದಲ್ಲಿ ಅವರ ಮೊಬೈಲ್‌ಗೆ ಚಿಕಿತ್ಸಾ ವೆಚ್ಚಕ್ಕೆ ಸಂಬಂಧಿಸಿದ ಮಾಹಿತಿ ಹೋಗುವಂತೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!