ಗೋಕಾಕ್ : ಬಿಲ್ ಕಟ್ಟು ಎಂದಿದ್ದಕ್ಕೆ ಹೆಸ್ಕಾಂ ಸಿಬ್ಬಂದಿಯನ್ನೇ ಎತ್ತಿ ಒಗೆದ ಕಿರಾತಕ ಕುಟುಂಬ
ಬೆಳಗಾವಿ : ವಿದ್ಯುತ್ ಬಿಲ್ ಕಟ್ಟುವಂತೆ ಹೇಳಿದ್ದಕ್ಕೆ ಹೆಸ್ಕಾಂ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗೋಕಾಕ್ ತಾಲೂಕಿನ ದುಪದಾಳ ಗ್ರಾಮದಲ್ಲಿ ನಡೆದಿದೆ.
ದುಪದಾಳ ಗ್ರಾಮದ ಸದ್ದಾಂ ಖಾದೀರಸಾಬ್ ಕೊತವಾಲ್ ಎಂಬಾತ 17,146 ರು. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದ. ಬಿಲ್ ಕಟ್ಟದ ಹಿನ್ನಲೆಯಲ್ಲಿ ಕಳೆದ ಏಳು ತಿಂಗಳ ಹಿಂದೆ ಹೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಕಟ್ ಮಾಡಿದ್ದರು. ಆದರೆ ಕಳ್ಳ ಮಾರ್ಗದಲ್ಲಿ ಸಂಪರ್ಕ ಪಡೆದಿದ್ದ ಆರೋಪಿಗಳು ಹೆಸ್ಕಾಂ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದರು.
ಅನಧಿಕೃತ ವಿದ್ಯುತ್ ಸಂಪರ್ಕ ಕಟ್ ಮಾಡಿ ಬಾಕಿ ಬಿಲ್ ಕಟ್ಟುವಂತೆ ಸಿಬ್ಬಂದಿ ಪ್ರಮೋದ್ ಮಾಳಗಿ ಹೇಳಿದ್ದಕ್ಕೆ ಕೆರಳಿದ. ಆರೋಪಿ ಸದ್ದಾಂ ಖಾದೀರಸಾಬ್ ಕೊತವಾಲ್ ಹಾಗೂ ಆತನ ಪುತ್ರ ಹಲ್ಲೆ ಮಾಡಿದ್ದಾರೆ. ಸಧ್ಯ ಈ ಹಲ್ಲೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

