ಗೋಕಾಕ ಆಂಟಿ, ಬೆಂಗಳೂರು ತುಂಟ : ರಕ್ತ ಚರಿತ್ರೆ
ಬೆಳಗಾವಿ : ಆತ ದೂರದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ, ಈಕೆ ಗೋಕಾಕ್ ನಗರದಲ್ಲಿ ವಾಸವಿದ್ದಳು. ಇಬ್ಬರ ಮಧ್ಯೆ ಪ್ರತಿದಿನ ಪ್ರೇಮ ಸಂದೇಶಗಳು ರವಾನೆಯಾಗುತ್ತಿದ್ದವು. ಆದರೆ ಕಳೆದ ಹದಿನೈದು ದಿನದಿಂದ ಗೋಕಾಕ್ ಆಂಟಿಯ ಫೋನ್ ಬಂದ್ ಆಗಿತ್ತು.
ಪ್ರೇಮ ಕಡಲಲ್ಲಿ ತೇಲಾಡುತ್ತಿದ್ದ ಬೆಂಗಳೂರಿನಲ್ಲಿ ತುಂಟ ಆನಂದ ಆಂಟಿ ಮೇರಿ ಜಾನ್ ಎಂದು ನೇರವಾಗಿ ಗೋಕಾಕ್ ಗೆ ಬಂದಿದ್ದಾನೆ. ಅಷ್ಟರಲ್ಲೇ ಆಂಟಿ ಶೋಭಾ ಮನೆಗೆ ಬಂದಾಗ ಗೊತ್ತಾಗಿದ್ದು ಪ್ರೀತಿಯ ಪಾರಿವಾಳ ಹಾರಿ ಹೋಗ್ತಿದೆ ಅಂತ.
ಆನಂದ ಬಂದಾಗ ಶೋಭಾ ತನ್ನ ಮಾಜಿ ಸ್ನೇಹಿತನ ಜೊತೆ ಮನೆಯಲ್ಲಿದ್ದಾಳೆ ಇದಕ್ಕೆ ಕೋಪಗೊಂದ ಆತ ಶೋಭಾ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ನನ್ನ ಪ್ರೀತಿಗೆ ಮೋಸ ಆಯ್ತೆಂದು ಮನಬಂದಂತೆ ಚಾಕುವಿನಿಂದ ಹಲ್ಲೆ ಮಾಡಿದ್ದು ನಾನು ಆತ್ಮ ರಕ್ಷಣೆಗೆ ಹಲ್ಲೆ ನಡೆಸಿದೆ ಎಂದು ಶೋಭಾ ಹೇಳಿದ್ದಾಳೆ.
ಆದರೆ ಆನಂದನ ಕಥೆ ಬೇರೆ. ನಾನು ಅವರ ಮನೆಗೆ ಹೋದಾಗ ಶೋಭಾ ಹಾಗೂ ಆಕೆಯ ಮಾಜಿ ಗೆಳೆಯ ಸೇರಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು ಈತ ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅತ್ತ ಆನಂದನಿಂದ ಹಲ್ಲೆಗೊಳಗಾದ ಶೋಭಾ ಗೋಕಾಕ್ ಆಸ್ಪತ್ರೆಗೆ ಸೇರಿದ್ದಾರೆ. ಒಟ್ಟಿನಲ್ಲಿ ಪ್ರಣಯ ಹಕ್ಕಿಗಳು ಹಾರಾಡಬೇಕಿದ್ದ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಚಾಕು ಚುಚ್ಚಿಕೊಂಡು ಆಸ್ಪತ್ರೆ ಸೇರಿದ್ದು, ರಕ್ತ ಕಣ್ಣೀರು ಆದಂತಾಗಿದೆ.


