ಗಜಾನನ ಮಂಗಸೂಳಿಗೆ ರಾಜಕೀಯ ಅವಕಾಶ ; ಅಥಣಿ ಮೂಲ ಕಾಂಗ್ರೆಸ್ಸಿಗರ ಬೆನ್ನಿಗೆ ನಿಂತ ಸಾಹುಕಾರ್
ಬೆಳಗಾವಿ : ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಗಜಾನನ್ ಮಂಗಸೂಳಿ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು. ಅನಿರೀಕ್ಷಿತವಾಗಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಹಿನ್ನಲೆಯಲ್ಲಿ ಮಂಗಸೂಳಿ ಸ್ಪರ್ಧೆಯಿಂದ ದೂರ ಸರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಬೆಳಗಾವಿ ಉಸ್ತುವಾರಿ ಸವಿವ ಸತೀಶ್ ಜಾರಕಿಹೊಳಿ ಮೂಲ ಕಾಂಗ್ರೆಸ್ ನಾಯಕರ ಬೆನ್ನಿಗೆ ನಿಲ್ಲುವ ಮೂಲಕ ತಮ್ಮ ರಾಜಕೀಯ ಎದುರಾಳಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮೂಲ ಕಾಂಗ್ರೆಸ್ಸಿಗರಿಗೆ ಅನ್ಯಾಯ ಆಗಿದೆ ಎಂದು ಅಥಣಿಯಲ್ಲಿ ಚರ್ಚೆ ವಿಚಾರ ಮಾತನಾಡಿದ ಸಚಿವರು ಎಲ್ಲರಿಗೂ ಟೈಮ್ ಬರುತ್ತೆ ಸರಿಯಾದ ಸಮಯಕ್ಕೆ ಎಲ್ಲರೂ ಕಾಯಬೇಕು ಎಂದರು.
ರಾಜಕೀಯದಲ್ಲಿ ಕಾಯಬೇಕು, ಅಥಣಿಯಲ್ಲಿ ಗಜಾನನ ಮಂಗಸೂಳಿ ಪಾತ್ರ ಹೆಚ್ಚಿದೆ. ಗಜಾನನ ಮಂಗಸೂಳಿ ಅವರಿಗೆ ರಾಜಕೀಯ ಅವಕಾಶ ಮತ್ತೊಮ್ಮೆ ಬರುತ್ತದೆ. ಮುಂಬರುವ ದಿನಗಳಲ್ಲಿ ಅವರಿಗೆ ರಾಜಕೀಯ ಸ್ಥಾನಮಾನ ಸಿಗುತ್ತವೆ ಎಂಬ ಭರವಸೆ ನೀಡಿದರು.


