ಉಚಿತ ಭಾಗ್ಯಗಳಿಂದ ಸಂಕಷ್ಟದಲ್ಲಿ ಸಿದ್ದು ಸರ್ಕಾರ ; ಬದಲಾಗುತ್ತಾ ಉಚಿತ ಬಸ್ ಪ್ರಯಾಣದ ನಿಯಮಗಳು
ಬೆಂಗಳೂರು : ಚುನಾವಣಾ ಪೂರ್ವದಲ್ಲಿ ಘೋಷಣೆ ಮೇಲೆ ಘೋಷಣೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ಸಧ್ಯ ಅದೇ ಗ್ಯಾರಂಟಿ ಯೋಜನೆಗಳಿಂದ ಸಂಕಷ್ಟಕ್ಕೆ ಸಿಲುಕಿದೆ. ಮೊದಲ ಗ್ಯಾರಂಟಿ ಶಕ್ತಿ ಯೋಜನೆಗಳಿಂದ ಅನೇಕ ತೊಂದರೆ ಉದ್ಭವಿಸಿದ ಪರಿಣಾಮ ಈಗ ನಿಯಮಗಳನ್ನೇ ಬದಲಾವಣೆ ಮಾಡುವ ಲಕ್ಷಣ ಗೋಚರಿಸುತ್ತಿದೆ.
ಹೌದು ಕಾಂಗ್ರೆಸ್ ಮೊದಲ ಗ್ಯಾರಂಟಿ ಶಕ್ತಿ ಯೋಜನೆಯಿಂದ ಅನೇಕ ಸಮಸ್ಯೆಗಳು ಕಾಣುತ್ತಿವೆ. ಪ್ರಮುಖವಾಗಿ ಮಹಿಳೆಯರು ಪ್ರವಾಹದ ರೂಪದಲ್ಲಿ ಮನೆಯಿಂದ ಹೊರಬಂದು ಬಸ್ ಸಂಚಾರ ಮಾಡುತ್ತಿದ್ದು, ಇದರಿಂದ ಪ್ರಯಾಣದಲ್ಲಿ ತೀರಾ ವ್ಯತ್ಯಯ ಕಾಣಿಸುತ್ತಿದೆ. ಗಂಡಸರು ಹಾಗೂ ಶಾಲಾ ಮಕ್ಕಳು ಬಸ್ ಸಂಚಾರ ಮಾಡಲು ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಮಹಿಳೆಯರ ಪ್ರಯಾಣ ಸಂಖ್ಯೆ ಅಧಿಕವಾದ ಕಾರಣ ಸಧ್ಯ ದೇವಸ್ಥಾನಗಳು ತುಂಬಿ ತುಳುಕುತ್ತಿವೆ. ಇದರಿಂದ ಪರಿಸ್ಥಿತಿ ತೀರಾ ಹದಗೆಡುತ್ತಿದ್ದು ಇದು ದೇವಸ್ಥಾನ ಆಡಳಿತ ಮಂಡಳಿಗೂ ತಲೆನೋವು ತರಿಸಿದೆ. ಇದರಿಂದ ಸರ್ಕಾರ ಶಕ್ತಿ ಯೋಜನೆಯಲ್ಲಿ ಕೆಲ ನಿಯಮ ಹಾಕುವ ಸಾಧ್ಯತೆ ದಟ್ಟವಾಗಿದೆ.
ಉಚಿಯ ಬಸ್ ಪ್ರಯಾಣದಲ್ಲಿ ಮಹಿಳೆಯರು ಪ್ರವಾಹದ ರೂಪದಲ್ಲಿ ಬರುತ್ತಿದ್ದು ಇದನ್ನು ತಡೆಗಟ್ಟಲು ಸರ್ಕಾರ ಕೆಲ ಹೊಸ ನಿಯಮ ಸೇರಿಸಲು ಮಂದಾಗಿದೆ. ಇದರ ಪ್ರಕಾರ ಬುಕಿಂಗ್ ವ್ಯವಸ್ಥೆ ಪ್ರಾರಂಭಿಸುವ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ನಿಮಯ ಜಾರಿಗೆ ಮಾಡಿ ನಿಯಂತ್ರಣ ಹಾಕುವ ಉದ್ದೇಶ ಕೂಡಾ ಇದೆ.
ಇನ್ನೂ ಕೆಲ ಬಸ್ ಗಳಿಗೆ ಮಾತ್ರ ಉಚಿತ ಪ್ರಯಾಣದ ಭಾಗ್ಯ ನೀಡುವ ಲಕ್ಷಣ ಗೋಚರಿಸುತ್ತಿದೆ. ಪ್ರತಿದಿನ ಲಕ್ಷಾಂತರ ಹಣದ ನಷ್ಟ ಅನುಭವಿಸುತ್ತಿರುವ ಸಾರಿಗೆ ಇಲಾಖೆಗೆ ಸಧ್ಯ ಗ್ಯಾರಂಟಿ ಗೊಂದಲದಿಂದ ಮತ್ತಷ್ಟು ಸಂಕಷ್ಟ ನೀಡುತ್ತಿರುವುದು ಸ್ಪಷ್ಟ.


