Select Page

Advertisement

ಎಕ್ಸಿಟ್ ಪೋಲ್ ನಲ್ಲಿ ಬಿಜೆಪಿಗೆ ಜೈ ಎಂದ ಮತದಾರ ; ಕರ್ನಾಟಕದಲ್ಲಿ ಕಾಂಗ್ರೆಸ್ ಅತಂತ್ರ

ಎಕ್ಸಿಟ್ ಪೋಲ್ ನಲ್ಲಿ ಬಿಜೆಪಿಗೆ ಜೈ ಎಂದ ಮತದಾರ ; ಕರ್ನಾಟಕದಲ್ಲಿ ಕಾಂಗ್ರೆಸ್ ಅತಂತ್ರ

ಬೆಂಗಳೂರು : 2024 ರ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಬಹು ನಿರೀಕ್ಷಿತ ಎಕ್ಸಿಟ್ ಪೋಲ್ ಗಳ ಅಂಕಿ ಅಂಶದ ಪ್ರಕಾರ ಬಿಜೆಪಿಗೆ ಮೂರನೇ ಬಾರಿಗೆ ಮತದಾರ ಅಧಿಕಾರ ನೀಡಿದ್ದಾನೆ.

ಬರುವ ಜೂನ್. 4 ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು ಇದಕ್ಕೆ ಮುಂಚಿತವಾಗಿ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಭರ್ಜರಿ ಜಯ ಸಿಗುವ ಮಾಹಿತಿ ಲಭಿಸಿದೆ.

ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ದೇಶದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ 377 ಸ್ಥಾನ ಸಿಗುತ್ತದೆ ಎಂದು ಅಂಕಿ ಅಂಶ ನೀಡಲಾಗಿದೆ. ಕಳೆದ ಬಾರಿಗಿಂತಲೂ ಈ ಬಾರಿ ಬಿಜೆಪಿ ಬೃಹತ್ ಅಂತರದ ಗೆಲುವು ಸಾಧಿಸಲಿದೆ ಎಂದು ಈ ಸಮೀಕ್ಷೆ ಹೇಳಿದೆ.

ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ಬಿಜೆಪಿ ಸ್ವತಂತ್ರವಾಗಿ 327 ಸ್ಥಾನ ಗೆಲ್ಲಲಿದೆ. ಇನ್ನೂ ಕಾಂಗ್ರೆಸ್ ದೇಶದಲ್ಲಿ ಕೇವಲ 62 ಸ್ಥಾನ ಮಾತ್ರ ಗೆಲ್ಲಬಹುದು ಎಂದು ಎಕ್ಸಿಟ್ ಪೋಲ್ ತಿಳಿಸಿದೆ. ಇನ್ನೂ ಕರ್ನಾಟಕದಲ್ಲಿ 20 ಕ್ಕೂ ಅಧಿಕ ಸ್ಥಾನ ಬಿಜೆಪಿ ಗೆಲ್ಲಬಹುದು ಎಂದು ಹೇಳಲಾಗುತ್ತಿದೆ.

ಇದುವರೆಗೂ ಬಂದ ಏಳಕ್ಕೂ ಅಧಿಕ ಸಮೀಕ್ಷೆಗಳ‌ ಪ್ರಕಾರ ಬಿಜೆಪಿ ಸ್ಪಷ್ಟ ಬಹುಮತ ಒಡೆಯಲಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂಬುದು ಎಕ್ಸಿಟ್ ಪೋಲ್ ಭವಿಷ್ಯ‌.

Advertisement

Leave a reply

Your email address will not be published. Required fields are marked *

error: Content is protected !!