ಡಾ. ಸೋನಾಲಿ ಸರ್ನೋಬತ್ ಅವರಿಗೆ “ ಚಾಣಕ್ಯ ” ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವ
ಬೆಳಗಾವಿ : ಖ್ಯಾತ ವೈದ್ಯೆ, ನಿಯತಿ ಫೌಂಡೇಶನ್ ಸಂಸ್ಥಾಪಕಿ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿಯಾದ ಡಾ. ಸೋನಾಲಿ ಸರ್ನೋಬತ್ ಅವರಿಗೆ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (ಪಿಆರ್‌ಸಿಐ) ವತಿಯಿಂದ ಚಾಣಕ್ಯ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಶನಿವಾರ ಮಂಗಳೂರಿನ ಮೋತಿ ಮಹಲ್ ಕನ್ವೆನ್ಷನ್ ಹಾಲ್‌ನಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (ಪಿಆರ್‌ಸಿಐ) ವತಿಯಿಂದ ನಡೆದ ಎರಡು ದಿನಗಳ ಘಟಿಕೋತ್ಸವದಲ್ಲಿ ಖ್ಯಾತ ವೈದ್ಯೆ. ಡಾ. ಸೋನಾಲಿ ಸರ್ನೋಬತ್ ಅವರಿಗೆ ಕೇಂದ್ರದ ಇಂದನ ಇಲಾಖೆ ರಾಜ್ಯ ಖಾತೆ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ ಚಾಣಕ್ಯ ರಾಷ್ಟ್ರೀಯ ಪ್ರಶಸ್ತಿ ನೀಡಿದರು.
ಡಾ. ಸರ್ನೋಬತ್ ಅವರು ಸಮಾಜ ಸೇವೆ ಮತ್ತು ಉದ್ಯಮಶೀಲ ನಾಯಕತ್ವದಲ್ಲಿ ಅವರ ಶ್ರೇಷ್ಠತೆಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರು ನಡೆಸುವ ನಿಯತಿ ಫೌಂಡೇಶನ್ ಅನೇಕ ಸಾಮಾಜಿಕ ಕಾರ್ಯಗಳ ಮೂಲಕ ಸಮಾಜದಲ್ಲಿ ಮಹತ್ವದ ಬದಲಾವಣೆ ಸಾಕ್ಷಿಯಾಗಿದೆ. ಈ
,ಕಾರಣಕ್ಕೆ ಚಾಣಕ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಡಿಜಿಟಲ್ ಯೋಗಕ್ಷೇಮ ಮತ್ತು ಡಿಜಿಟಲ್ ಆರೋಗ್ಯದ ನಿರ್ವಹಣೆಯಲ್ಲಿ ಮಹಿಳೆಯರು ಎಂಬ ವಿಷಯದ ಚರ್ಚೆಯಲ್ಲಿ ಡಾ. ಸರ್ನೋಬತ್ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಿಆರ್ಸಿಐ ಆಡಳಿತ ಮಂಡಳಿ ಅಧ್ಯಕ್ಷೆ ಗೀತಾ ಶಂಕರ್, ಮಿಸ್ ಗ್ಲೋಬಲ್ ಇಂಡಿಯಾ 2024 ಸ್ವೀಝಲ್ ಫುರ್ಟಾಡೊ ಉಪಸ್ಥಿತರಿದ್ದರು.
ವೈದ್ಯಕೀಯದಲ್ಲಿ ಚಿನ್ನದ ಪದಕ ವಿಜೇತರಾಗಿ ಮತ್ತು ಹೆಸರಾಂತ ಅಂಕಣಕಾರರಾಗಿ, ಡಾ. ಸರ್ನೋಬತ್ ಹೋಮಿಯೋಪತಿ ಅಭ್ಯಾಸದಲ್ಲಿ 20 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಬೆಳಗಾವಿ, ಸಾಂಗ್ಲಿ ಮತ್ತು ಗೋವಾದಲ್ಲಿರುವ ಅವರ ಚಿಕಿತ್ಸಾಲಯಗಳು ಹೋಮಿಯೋಪತಿ, ನ್ಯಾಚುರೋಪತಿ ಮತ್ತು ಬ್ಯಾಚ್ ಫ್ಲವರ್ ಥೆರಪಿಯನ್ನು ಸಂಯೋಜಿಸುವ ಸಮಗ್ರ ಚಿಕಿತ್ಸಾ ವಿಧಾನವನ್ನು ನೀಡುತ್ತವೆ.
ಡಾ. ಸರ್ನೋಬತ್ ಅವರ ಸಮಾಜ ಸೇವೆ ಮತ್ತು ಆರೋಗ್ಯ ರಕ್ಷಣೆಗೆ ಅವರ ಸಮರ್ಪಣೆಯು ಶಾಶ್ವತವಾದ ಪರಿಣಾಮವನ್ನು ಸೃಷ್ಟಿಸಿದೆ, ಅವರ ಹೆಜ್ಜೆಗಳನ್ನು ಅನುಸರಿಸಲು ಇತರರನ್ನು ಪ್ರೇರೇಪಿಸುತ್ತದೆ.


