ಸಹೋದರ ಮಧ್ಯೆ ಸವಾಲ್ ; ಕಿತ್ತೂರು ಡಿಸಿಸಿ ನಿರ್ದೇಶಕ ಸ್ಥಾನದ ಅಭ್ಯರ್ಥಿ ಹೆಸರು ಘೋಷಣೆ
ಚನ್ನಮ್ಮನ ಕಿತ್ತೂರು : ಅಕ್ಟೋಬರ್ 19 ರಂದು ನಡೆಯುವ ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ನಾನಾಸಾಹೇಬ ಪಾಟೀಲ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಘೋಷಿಸಿದರು.
ಇಲ್ಲಿಯ ಚನ್ನಬಸಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಸದಸ್ಯರ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು.
ಸಭೆ ಆಗಮಿಸಿದ ಅದ್ಯಕ್ಷರು, ಉಪಾಧ್ಯಕ್ಷ, ಸದಸ್ಯರು ಹಾಗೂ ಕಾರ್ಯದರ್ಶಿ ಸೇರಿ ಒಟ್ಟಾರೆ ಶ್ರಮಿಸಿದರೆ ನಮ್ಮಅಭ್ಯರ್ಥಿ ನಾನಾಸಾಹೇಬ ಗೆಲುವು ಸುಲಭವಾಗಿರುತ್ತದೆ. 32 ಸೊಸೈಟಿಗಳಲ್ಲಿ 18 ರಿಂದ 20 ಸೊಸೈಟಿಯ ಮತದಾರರು ನಮ್ಮ ಅಭ್ಯರ್ಥಿಗೆ ಪರವಾಗಿ ಇದ್ದಾರೆ ಎಂಬ ವಿಶ್ಚಾಸವಿದೆ ಎಂದರು.
ಕಿತ್ತೂರು ಕ್ಷೇತ್ರದ ಅಭಿವೃದ್ಧಿಗೆ ಪ್ರತಿ ವರ್ಷ5 ಕೋಟಿ ಅನುದಾನ ನೀಡಲಾಗುತ್ತದೆ. ಈ ವರ್ಷ ಕೂಡಾ 5 ಕೋಟಿ ಅನುದಾನ ನೀಡಲಾಗುತ್ತದೆ ಎಂದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಸೊಸೈಟಿಯ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರ ಒತ್ತಾಯದ ಮೇಲೆ ಸಹೋದರ ನಾನಾಸಾಹೇಬ ಬಿಡಿಸಿಸಿ ಬ್ಯಾಂಕ್ ಚುನಾವಣೆ ಸ್ಪರ್ಧಿಸಿದ್ದಾರೆ. ಸುಮಾರು 20 ಕ್ಕೂ ಹೆಚ್ಚು ಸೊಸೈಟಿ ಮತದಾರರು ಮತ ನೀಡಿ ಗೆಲ್ಲಿಸುವ ವಿಶ್ವಾಸವಿದೆ ಎಂದರು.
ಡಿಸಿಸಿ ಬ್ಯಾಂಕ್ ಚುನಾವಣೆ ಅಭ್ಯರ್ಥಿ ನಾನಾಸಾಹೇಬ ಪಾಟೀಲ, ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಶಿವನಗೌಡ ಪಾಟೀಲ, ದೇವೇಂದ್ರ ಪಾಟೀಲ ಮಾತನಾಡಿದರು.
ಪಟ್ಟಣ ಪಂಚಾಯತ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ ಎಫ್ ಜಕಾತಿ, ನಾನಾಸಾಹೇಬ ಪಾಟೀಲ, ಶಂಕರ ಹೊಳಿ, ಶೇಕಪ್ಪ ಯರಗೊಪ್ಪ, ಸಂಗನಗೌಡ ಪಾಟೀಲ, ಸಿ ಅರ್ ಪಾಟೀಲ, ರಾಜೇಂದ್ರ ಇನಾಮದಾರ, ಸಾವಂತ ಕಿರಬನವರ, ಬಸವರಾಜ ಹಳೆಮನಿ, ಸುನೀಲ ಘಿವಾರಿ ಸೇರಿದಂತೆ ಅನೇಕರು ಇದ್ದರು. ಅನಿಲ ಎಮ್ಮಿ ಕಾರ್ಯಕ್ರಮ ನಿರೂಪಿಸಿದರು.


