ದೇವಾಲಯಕ್ಕೆ ಆಫ್ರಿಕಾ ಕ್ರಿಕೆಟ್ ಆಟಗಾರ ಭೇಟಿ ; ಹೆಮ್ಮೆಯ ಸನಾತನಿ ಎಂದ ಭಾರತೀಯರು
ದೇಶದಲ್ಲಿ ಸಧ್ಯ ಐಸಿಸಿ ಕ್ರಿಕೆಟ್ ವರ್ಡ್ ಕಪ್ ಆರಂಭವಾಗಿದ್ದು ಅನೇಕ ರಾಷ್ಟ್ರಗಳ ತಂಡಗಳು ಭಾರತಕ್ಕೆ ಆಗಮಿಸಿವೆ. ಈ ಮಧ್ಯೆ ಕೆರಳದ ( Kerala ) ಅನಂತ ಫಧ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಆಫ್ರಿಕಾ ತಂಡದ ಆಟಗಾರ ಆಶಿರ್ವಾದ ಪಡೆದುಕೊಂಡಿದ್ದಾರೆ.
ಹೌದು ಆಫ್ರಿಕಾ ಕ್ರಿಕೆಟ್ ತಂಡದ ಕೇಶವ್ ಮಹಾರಾಜ್ ( Keshav maharaj ) ಅವರು ಅನಂತ ಫಧ್ಮನಾಭ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಆಶಿರ್ವಾದ ಪಡೆದುಕೊಂಡಿದ್ದಾರೆ. ಮೂಲತಃ ಭಾರತೀಯವರಾದ ಇವರು ಸಧ್ಯ ದೇವಾಲಯಕ್ಕೆ ಭೇಟಿ ನೀಡಿದ್ದು ಹೆಮ್ಮೆಯ ಸನಾತನಿ ಎಂದು ಭಾರತೀಯರು ಆಡಿಕೊಳ್ಳುತ್ತಿದ್ದಾರೆ.
ಬಿಳಿ ಪಂಚೆ ಧರಿಸಿದ ಕೇಶವ್ ಮಹಾರಾಜ ದೇವರ ದರ್ಶನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟಿಗನ ಪೋಟೋ ಭರ್ಜರಿ ವೈರಲ್ ಆಗುತ್ತಿದ್ದು, ಹೆಮ್ಮೆಯ ಸನಾತನಿ ಎಂದು ಕೊಂಡಾಡಿದ್ದಾರೆ.


