Select Page

Advertisement

ಅತ್ತೆ ಕೈಗೆ ಗ್ಯಾರಂಟಿ ಹಣ 2 ಸಾವಿರ ಕೊಡಲಿಲ್ಲ ಅಂದ್ರೆ ಚಪ್ಪಲಿ ಕೈಯಲ್ಲಿ ಬರುತ್ತೆ ; ಅಜ್ಜಿಯ ಆಕ್ರೋಶದ ಮಾತು

ಅತ್ತೆ ಕೈಗೆ ಗ್ಯಾರಂಟಿ ಹಣ 2 ಸಾವಿರ ಕೊಡಲಿಲ್ಲ ಅಂದ್ರೆ ಚಪ್ಪಲಿ ಕೈಯಲ್ಲಿ ಬರುತ್ತೆ ; ಅಜ್ಜಿಯ ಆಕ್ರೋಶದ ಮಾತು

ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಘೋಷಣೆಗಳ‌ ಮೇಲೆ ಜನ ಬೆಟ್ಟದಷ್ಟು ನಿರೀಕ್ಷೆ ಇಟ್ಟು ಕುಳಿತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಗೃಹಲಕ್ಷ್ಮೀ ಯೋಜನೆಯ ಮನೆ ಒಡತಿಗೆ ಎರಡು ಸಾವಿರ ಕೊಡಬೇಕಾಗಿದ್ದನ್ನು ಅತ್ತೆಗೆ ಕೊಡಬೇಕಾ ಅಥವಾ ಸೊಸೆಗೆ ಕೊಡಬೇಕಾ ಎಂಬುದು ಸವಾಲಾಗಿದೆ.

ಅತ್ತೆಗೆ ಎರಡು ಸಾವಿರ ರೂ ಕೊಟ್ಟರೆ ಸೊಸೆಗೆ ಕೋಪ, ಸೊಸೆಗೆ ಕೊಟ್ಟರೆ ಅತ್ತೆಗೆ ಕೋಪ. ಆದರೆ ಇಲ್ಲೊಬ್ಬ ಅಜ್ಜಿ ಸರ್ಕಾರ ಎರಡು ಸಾವಿರ ಹಣ ನನ್ನ ಕೈಯಲ್ಲಿ ಕೊಡಬೇಕು. ಎಲ್ಲಾ ಅತ್ತೆಗಳ‌ ಕೈಯಲ್ಲಿ ಈ ಹಣ ಕೊಡಬೇಕು. ಇಲ್ಲದಿದ್ದರೆ ಕಾಲಲ್ಲಿನ ಚಪ್ಪಲಿ ಕೈಯಲ್ಲಿ ಬರುತ್ತವೆ ಎಂದು ಹೇಳಿರುವ ವೀಡಿಯೊ ಸಧ್ಯ ವೈರಲ್ ಆಗುತ್ತಿದೆ.

ಇನ್ನೂ ಈ ಕುರಿತು ಅನೇಕ ಸಚಿವರು ವಿವಿಧ ಹೇಳಿಕೆ ಕೊಡುತ್ತಿದ್ದಾರೆ. ಗೃಹಲಕ್ಷ್ಮೀ ಸಹಾಯಧನ ಮನೆಯ ಹಿರಿಯ ಸದಸ್ಯರಿಗೆ ನೀಡುವುದು ಎಂದು ಹೇಳಲಾಗುತ್ತಿದೆ. ಜೊತೆಗೆ ಸೊಸೆ ಮನೆ ಒಡತಿ ಇದ್ದರೆ ಅವಳಿಗೂ ಕೊಡಬೇಕು. ಈ ಎಲ್ಲಾ ಗೊಂದಲಗಳ‌‌ ಮಧ್ಯ ವಯಸ್ಸಾದ ಮಹಿಳೆಯರು ಸರ್ಕಾರಕ್ಕೆ ನಮಗೆ ಹಣ ಕೊಡಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ.

ಈ ಕುರಿತು ಖಾಸಗಿ ಸುದ್ದಿ ವಾಹಿನಿಯಲ್ಲಿ ಮಾತನಾಡಿದ ಅಜ್ಜಿ. ಗ್ಯಾರಂಟಿ ಹಣ ನಮ್ಮ ಖಾತೆಗೆ ಕೊಡಿ. ಇಲ್ಲವಾದರೆ ನೀವೆ ನಮಗೆ ಚುನಾವಣೆ ಸಂದರ್ಭದಲ್ಲಿ ಮಾತು ಕೊಟ್ಟಿದ್ದೀರಿ. ಒಂದು ವೇಳೆ ಉಲ್ಟಾ ಹೊಡೆದರೆ ಚಪ್ಪಲಿ ಕೈಯಲ್ಲಿ ಬರುತ್ತವೆ ಎಂದು ಆಕ್ರೋಶ ಹೊರಹಾಕಿದಾರೆ.

Advertisement

Leave a reply

Your email address will not be published. Required fields are marked *

error: Content is protected !!