ನಮಸ್ಕಾರ ದೇವ್ರು…..ಸಿಎಂ ಹಾಗೂ ರಾಜ್ಯಪಾಲರ ಭೇಟಿ ಹೇಗಿತ್ತು..!
ಬೆಂಗಳೂರು : ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಿದ್ದ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರು ಬೀದಿಯಲ್ಲಿ ನಿಂತು ಹೋರಾಟ ಮಾಡಿದ್ದು ನಿಮಗೆಲ್ಲೆ ನೆನಪಿದೆ. ಪತ್ರ ವ್ಯವಹಾರದ ಮೂಲಕ ನಡೆಯುತ್ತಿದ್ದ ರಾಜಭವನ ಹಾಗೂ ಸರ್ಕಾರದ ನಡುವಿನ ಸಂವಾದ ಸಧ್ಯ ಅಷ್ಟಕ್ಕೆ ಸೀಮಿತವಾಗಿದೆ. ಆದರೆ ಇಂದು ನಡೆದದ್ದು ವಿಶೇಷ ಕ್ಷಣ.
ಹೌದು ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ನಡೆ ವಿರುದ್ಧ ಸ್ವತಃ ಸಿಎಂ ಸಿದ್ದರಾಮಯ್ಯ ಸೇರಿ ಇಡೀ ಕಾಂಗ್ರೆಸ್ ಪಕ್ಷವೇ ಆಕ್ರೋಶ ಹೊರಹಾಕುತ್ತಿತ್ತು. ಆದರೆ ಇಂದು ಖುದ್ದು ರಾಜ್ಯಪಾಲರು ಹಾಗೂ ಸಿಎಂ ಮುಖಾಮುಖಿ ಆಗಿದ್ದು ಅಷ್ಟೇ ಅಲ್ಲದೇ ಇಬ್ಬರು ಕೈ ಹಿಡಿದು ಮುಗುಳುನಗೆ ಬೀರಿದ್ದು ವಿಶೇಷವಾಗಿತ್ತು.
ಭಾರತದ ಪ್ರವಾಸದಲ್ಲಿರುವ ಮಾಲ್ಡೀವ್ಸ್ ರಾಟ್ಷ್ರಪತಿ ಅವರ ಗೌರವಾರ್ಥ ರಾಜಭವನದಲ್ಲಿ ಔತನ ಕೂಟ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಆಹ್ವಾನದ ಮೇರೆಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿಎಂ ಸಿದ್ದರಾಮಯ್ಯ ಕೈ ಕುಲುಕಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಸೌಂದರ್ಯವೇ ಅದ್ಬುತ ಎಂದೆನಿಸುತ್ತದೆ. ರಾಜಕೀಯವಾಗಿ ಎಷ್ಟೇ ಪರ ವಿರೋಧ ಇದ್ದರೂ ನಮ್ಮ ದೇಶ ಹಾಗೂ ಕಾನೂನು ಎಂದು ಬಂದಾಗ ನಾಯಕರು ತಮ್ಮ ಎಲ್ಲಾ ಆರೋಪ, ಪ್ರತ್ಯಾರೋಪ ಬದಿಗಿಟ್ಟು ಒಂದಾಗಿರುವುದು ವಿಶೇಷ.


