ಆಕ್ಸಿಜನ್ ಸಿಲಿಂಡರ್ ಹಿಡ್ಕೊಂಡು ಮಾಯಕ್ಕ ದೇವಿ ದರ್ಶನ ; ಗಮನಸೆಳೆದ ದಂಪತಿಗಳ ಭಕ್ತಿ…! Video

ರಾಯಬಾಗ : ಪತ್ನಿಗೆ ಉಸಿರಾಟ ತೊಂದರೆ ಇದ್ದರೂ ಆಕ್ಸಿಜನ್ ಸಿಲಿಂಡರ್ ಜೊತೆಗೆ ದಂಪತಿಗಳು 176 ಕಿ.ಮೀಟರ್ ಸಂಚರಿಸಿ ಚಿಂಚಲಿ ಮಾಯಕ್ಕ ದೇವಿ ದರ್ಶನ ಪಡೆದ ಘಟನೆ ಬುಧವಾರ ನಡೆದಿದೆ.
ಮಹಾರಾಷ್ಟ್ರದ ಪಂಢರಪುರದ ದಂಪತಿಗಳು ಕಳೆದ 15 ವರ್ಷಗಳಿಂದ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕ ದೇವಿ ದರ್ಶನಕ್ಕೆ ಆಗಮಿಸುತ್ತಿದ್ದರು. ಆದರೆ ಈ ಬಾರಿ ಪತ್ನಿಗೆ ಶ್ವಾಸಕೋಶ ಸಮಸ್ಯೆ ಉಂಟಾಗಿದೆ.
ವೈದ್ಯರ ಸೂಚನೆ ಮೇರೆಗೆ ಆಕ್ಸಿಜನ್ ಜೊತೆಗೆ ಅನಾರೋಗ್ಯ ಪೀಡಿತ ಪತ್ನಿಗೆ ದೇವಿ ದರ್ಶನ ಮಾಡಿಸಿದ್ದಾರೆ. ಎಷ್ಟೇ ತೊಂದರೆ ಇದ್ದರೂ ದೇವಿ ದರ್ಶನ ಮಾಡಿದಾಗ ಮಾತ್ರ ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಈ ಕಾರಣಕ್ಕೆ ಆಗಮಿಸಿದ್ದೆನೆ ಎಂದು ದಂಪತಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಸಧ್ಯ ಇವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


